

ಹರಪನಹಳ್ಳಿ: ತಾಲೂಕಿನ ಹಾರಕನಾಳು ದೊಡ್ಡ ಕೃಷ್ಣಾನಾಯ್ಕ ಅವರ ಜಮೀನಿನಲ್ಲಿ ಶನಿವಾರ ಒಣಗಿದ ಆಲದ ಮರಕ್ಕೆ ವಿದ್ಯುತ್ ತಂತಿ ತಗುಲಿದ್ದರಿಂದ ಏಕಾಏಕಿ ಬೆಂಕಿ ಹತ್ತಿದ್ದು ಜಮೀನಿನಲ್ಲಿ ಹಾಕಲಾಗಿದ್ದ 500 ಅಡಿಕೆ ಗಿಡಗಳಿಗೆ ಬೆಂಕಿ ಆವರಿಸಿ ಸುಟ್ಟಿವೆ. ಗಿಡಗಳಿಗೆ ನೀರು ಹಾಯಿಸಲು ಹಾಕಿದ್ದ ಡ್ರಿಪ್ ಪೈಪ್, ಬದುವಿನಲ್ಲಿ ಹಾಕಿದ್ದ ಮಹಗಣಿ, ಹೆಬ್ಬೇವು, ಸೇರಿದಂತೆ ನಿಂಬೆ, ಪೇರಲ ಗಿಡಗಳು ಸುಟ್ಟಿವೆ. ಅಗ್ನಿ ಶಾಮಕ ದಳ ಬೆಂಕಿ ಆರಿಸುವ ಕಾರ್ಯ ನಡೆಸಿತು.