

ಶಿವರಾಜ ಎಂ, ಬೆಂಗಳೂರು ಗ್ರಾಮಾಂತರ
ಬೇಸಿಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಅರಣ್ಯ ಇಲಾಖೆಗೆ ಬೆಂಕಿ ನಂದಿಸುವ ಸವಾಲು ಎದುರಾಗುತ್ತದೆ, ಅರಣ್ಯ ಪ್ರದೇಶ ರಕ್ಷಣೆಗೆ ಬೆವರು ಹರಿಸುವ ಸಿಬ್ಬಂದಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೈರಾಣಾಗುತ್ತಿದ್ದಾರೆ.
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿರುವ ಅರಣ್ಯ ಪ್ರದೇಶದ ರಕ್ಷಣೆಗೆ ಸಿಬ್ಬಂದಿ ಕೊರತೆ ಎದುರಾಗಿರುವುದು ಅಧಿಕಾರಿಗಳನ್ನು ಮತ್ತಷ್ಟು ಕಂಗೆಡಿಸಿದೆ. ಬೆರಳೆಣಿಕೆ ಸಿಬ್ಬಂದಿ ನೆಚ್ಚಿಕೊಂಡೇ ಬೇಸಿಗೆ ವೇಳೆ ಬೆಂಕಿಯಿಂದ ಅರಣ್ಯ ರಕ್ಷಣೆ ಮಾಡುವ ಸವಾಲು ಎದುರಿಸುವಂತಾಗಿದೆ.
ಹೊಸ ಹುಲ್ಲಿಗಾಗಿ ಬೆಂಕಿ! ಸಾಮಾನ್ಯವಾಗಿ ಅರಣ್ಯದಂಚಿನ ಗ್ರಾಮಗಳಲ್ಲಿ ಬೆಂಕಿ ಅನಾಹುತ ಹೆಚ್ಚು ಕಂಡುಬರುತ್ತವೆ. ಕೆಲವರು ಹೊಸ ಹುಲ್ಲಿನ ಆಸೆಗೆ ಒಣ ಹುಲ್ಲಿಗೆ ಬೆಂಕಿ ಹಚ್ಚುವ ಕೃತ್ಯ ಎಸಗುತ್ತಾರೆ. ಇದರಿಂದ ಎಕರೆಗಷ್ಟಲೇ ವನ ಸಂಪತ್ತು ಸುಟ್ಟು ಬೂದಿಯಾಗುತ್ತಿದೆ. ಪ್ರತಿ ವರ್ಷ ಇದು ಪುನರಾವರ್ತನೆಯಾಗುತ್ತಿದ್ದು, ಇದನ್ನು ತಹಬಂದಿಗೆ ತರುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಿನ ಕೆಲಸವಾಗಿದೆ.
4 ಎ್ಐಆರ್: ಕಳೆದೊಂದು ವರ್ಷದಲ್ಲಿ ಉದ್ದೇಶ ಪೂರ್ವಕವಾಗಿ ಅರಣ್ಯಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಅರಣ್ಯ ಇಲಾಖೆ ನಾಲ್ಕು ಎ್ಐಆರ್ ದಾಖಲಿಸಿದೆ. ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಉದ್ದೇಶಪೂರ್ವಕವಾಗಿ ಕೃತ್ಯ ಎಸಗುತ್ತಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಾರಿ ಇದನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿರುವ ಅಧಿಕಾರಿಗಳು, ಎ್ಐಆರ್ ಅಸಪ್ರಯೋಗಿಸಲಿದ್ದಾರೆ. ಆದರೆ ಪ್ರಕರಣ ದಾಖಲಿಸಿದ್ದರು ಎನ್ನುವ ಕಾರಣಕ್ಕೆ ಮತ್ತಷ್ಟು ಕೃತ್ಯ ಎಸಗುವ ಅಪಾಯವೂ ಇದೆ ಎಂಬ ಆತಂಕ ಇಲಾಖೆಗಿದೆ. ಈ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಜನರಲ್ಲಿ ಜಾಗೃತಿ ಮೂಡಿಸಲು ಕಸರತ್ತು ನಡೆಸುತ್ತಿದೆ.
ಸಿಬ್ಬಂದಿ ಕೊರತೆ: ಆರೇಳು ವರ್ಷಗಳಿಂದ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನೇಮಕಾತಿಯಾಗಿಲ್ಲ. ಪ್ರಸ್ತುತ ಶೇ.60 ಸಿಬ್ಬಂದಿ ಕೊರತೆ ಇದೆ, ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಗುತ್ತಿಗೆ ಆಧಾರದ ಮೇಲೆ 20 ಮಂದಿಯನ್ನು ೈರ್‌ವಾಚರ್‌ಗಳನ್ನಾಗಿ ನೇಮಿಸಿಕೊಳ್ಳಲಾಗಿದೆ. ಆದರೆ ಈ ಬೆರಳೆಣಿಕೆ ಸಿಬ್ಬಂದಿಯಿಂದ ನಿರೀಕ್ಷಿತ ಲಿತಾಂಶ ಕಷ್ಟಸಾಧ್ಯವಾಗಿದೆ.
ಒತ್ತುವರಿ ಜಟಾಪಟಿ: ಜಿಲ್ಲೆಯಾದ್ಯಂತ ಅರಣ್ಯದಂಚಿನ ಗ್ರಾಮಗಳಲ್ಲಿ ಅರಣ್ಯಗಳ ಒತ್ತುವರಿ ಅವ್ಯಾಹತವಾಗಿದೆ, ಈ ಒತ್ತುವರಿ ಅರಣ್ಯ ಪ್ರದೇಶವನ್ನು ಸುಪರ್ದಿಗೆ ಪಡೆಯುವುದು ಇಲಾಖೆಗೆ ಮತ್ತೊಂದು ಸವಾಲಿನ ಕೆಲಸವಾಗಿದೆ. ಕಳೆದೊಂದು ವರ್ಷದಲ್ಲಿ ಸುಮಾರು 500 ಎಕರೆಯಷ್ಟು ಅರಣ್ಯ ಪ್ರದೇಶದ ಒತ್ತುವರಿ ತೆರವುಗೊಳಿಸಲಾಗಿದೆ. ಈ ಒತ್ತುವರಿ ತೆರವು ವಿಚಾರದಲ್ಲಿ ಇಲಾಖೆ ಹಾಗೂ ಜನರ ನಡುವೆ ಸಾಕಷ್ಟು ಜಟಾಪಟಿ ನಡೆಯುತ್ತದೆ ಹಾಗೂ ಹಲವು ಕಾನೂನಾತ್ಮಕ ಹೋರಾಟ ನಡೆಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮಗಳಿಗೆ ಚಿರತೆಗಳು ಲಗ್ಗೆ: ಇತ್ತೀಚಿನ ದಿನಗಳಲ್ಲಿ ದೊಡ್ಡಬಳ್ಳಾಪುರ, ನೆಲಮಂಗಲ ಭಾಗಗಳಲ್ಲಿ ಚಿರತೆ ಹಾವಳಿ ಹೆಚ್ಚಿದೆ. ಬೇಸಿಗೆಯಲ್ಲಿ ಅರಣ್ಯಗಳಿಗೆ ಬೆಂಕಿ ಬಿದ್ದರೆ ಚಿರತೆ ಸೇರಿ ಇನ್ನಿತರ ಕಾಡು ಪ್ರಾಣಿಗಳು ಗ್ರಾಮಗಳತ್ತ ಮುಖ ಮಾಡುತ್ತವೆ, ಮತ್ತೆ ಕಾಡುಪ್ರಾಣಿಗಳ ಹಾವಳಿ ಎಂದು ಜನ ಬೊಬ್ಬೆ ಹೊಡೆಯುತ್ತಾರೆ, ಅವುಗಳನ್ನು ಸೆರೆ ಹಿಡಿದು ಮತ್ತೆ ಕಾಡಿಕಟ್ಟುವಷ್ಟರಲ್ಲಿ ಸಿಬ್ಬಂದಿ ಬೆವರು ಹರಿಸಬೇಕಿದೆ.
ಒಣತ್ಯಾಜ್ಯಗಳಿಂದ ಅಪಾಯ: ಅರಣ್ಯದಂಚಿನಲ್ಲಿ ಸಾಗುವ ವಾಹನ ಸವಾರರು ಪ್ಲಾಸ್ಟಿಕ್ ಬಾಟಲಿ, ಪೇಪರ್ ಸೇರಿ ಒಣ ತ್ಯಾಜ್ಯವನ್ನು ರಸ್ತೆ ಬದಿ ಎಸೆಯುವುದು ಸಾಮಾನ್ಯವಾಗಿದೆ, ದಾರಿಹೋಕರು ಬೀಡಿ-ಸಿಗರೇಟ್ ಸೇದಿ ಒಣ ಹುಲ್ಲಿನ ಮೇಲೆ ಎಸೆಯುವುದರಿಂದ ಬೇಸಿಗೆ ವೇಳೆ ಇಂಥ ತ್ಯಾಜ್ಯಕ್ಕೆ ಬೆಂಕಿ ತಾಗಿದರೆ ಕ್ಷಣಾರ್ಧದಲ್ಲಿ ಅರಣ್ಯ ಪ್ರದೇಶಕ್ಕೆ ಆವರಿಸುತ್ತದೆ. ತ್ಯಾಜ್ಯ ಎಸೆಯದಂತೆ ಜನರಲ್ಲಿ ಜಾಗೃತಿ ಮೂಡಿಸುವುದು ಇಲಾಖೆಗೆ ಕಷ್ಟಸಾಧ್ಯವಾಗಿದೆ.
ಬೇಸಿಗೆಯಲ್ಲಿ ಬೆಂಕಿಯಿಂದ ಅರಣ್ಯ ರಕ್ಷಣೆಗೆ ಇಲಾಖೆ ಎಲ್ಲ ಅಗತ್ಯಕ್ರಮ ಕೈಗೊಂಡಿದೆ, ಮುಖ್ಯವಾಗಿ ದೊಡ್ಡಮಟ್ಟದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಅರಣ್ಯದಂಚಿನಲ್ಲಿ ೈರ್‌ಲೈನ್ ಮಾಡಲಾಗುತ್ತಿದೆ. ವಾಚರ್ ನಿಯೋಜಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸಹಕಾರದಲ್ಲಿ ಆಯಾ ವ್ಯಾಪ್ತಿಯ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಿಯಂತ್ರಣಕ್ಕೆ ಶ್ರಮಿಸಲಿದ್ದಾರೆ. ಈಗಾಗಲೇ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚುವ ಆರೋಪದಡಿ 4 ಎ್ಐಆರ್ ದಾಖಲಿಸಲಾಗಿದೆ, ಸುಮಾರು 500 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ, ಈ ವಿಷಯದಲ್ಲಿ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು.
ಸರಿನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ