

ರಾಯಬಾಗ: ಕೇಂದ್ರ ಸರ್ಕಾರದ ಮಹತ್ವಾಕಾಂ ಯೋಜನೆಯಾದ ಅಗ್ನಿಪಥ ಯೋಜನೆ ದೇಶ ಸೇವೆಗೆ ಯುವಕರನ್ನು ಸನ್ನದಟಛಿಗೊಳಿಸುತ್ತದೆ ಎಂದು ಶಾಸಕ ಡಿ.ಎಂ.ಐಹೊಳೆ ತಿಳಿಸಿದರು.
ತಾಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿ ಅಗ್ನೀವಿರರಾಗಿ ಆಯ್ಕೆಯಾಗಿರುವ ಅಭಿಷೇಕ ನೇಜಕರ, ಮಿಥುನ ಪಾಟೀಲ, ಶುಭಂ ಭೋವಿ, ಸಮ್ಮೇದ ಶಿರಗನ್ನವರ, ಸತೀಶ ಪರಗೌಡ ಅವರನ್ನು ಸೋಮವಾರ ಸನ್ಮಾನಿಸಿ ಮಾತನಾಡಿ, ಯುವಕರಿಗೆ ಉದ್ಯೋಗದೊಂದಿಗೆ ದೇಶಸೇವೆ ಮಾಡಲು ಈ ಯೋಜನೆ ಅನುಕೂಲವಾಗಲಿದೆ ಎಂದರು. ಗ್ರಾಪಂ ಅಧ್ಯ ರಾಮಚಂದ್ರ ಕಾಟೆ, ತಾತ್ಯಾಸಾಹೇಬ ಕಾಟೆ, ಮಹಾವೀರ ಪಾಟೀಲ, ಶಾಂತಿನಾಥ ಪಾಟೀಲ, ಅನಿಲ ಹಂಜೆ, ಅಜಿತ ಖೇಮಲಾಪುರೆ, ಸತ್ತೆಪ್ಪ ಭೀಷ್ಠೆ, ಅಜಿತ ಕಾಮಗೌಡ, ಅಣ್ಣಾಸಾಹೇಬ ಕೂಗೆ, ದಶರಥ ಕಾಟೆ, ಅರುಣ ಶಿಂಧೆ ಇತರರಿದ್ದರು.