ಎನ್ಒಸಿ ನೀಡಲು ಲಂಚ: ಅಗ್ನಿಶಾಮಕ ಅಧಿಕಾರಿ ಲೋಕಾ ಬಲೆಗೆ

IMG-20240805-WA0045
Published on

ಕಲಬುರಗಿ: ಪೆಟ್ರೋಲ್ ಪಂಪ್‌ಗೆ ಎನ್‌ಒಸಿ ನೀಡಲು 20 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ರಾಜ್ಯ ಅಗ್ನಿಶಾಮಕ ತುರ್ತು ಸೇವೆಗಳ ಜಿಲ್ಲಾ ಅಧಿಕಾರಿ, ಒಬ್ಬ ಸಿಬ್ಬಂದಿ ಹಾಗೂ ಪಿಡಬ್ಲ್ಯುಡಿ ಜೆಇ ಲೋಕಾಯುಕ್ತ ಪೊಲೀಸ್ ಬಲೆಗೆ ಸೋಮವಾರ ಸಂಜೆ ಸಿಕ್ಕಿ ಬಿದ್ದಿದ್ದಾರೆ.
ರಾಜ್ಯ ಅಗ್ನಿಶಾಮಕ ತುರ್ತು ಸೇವೆಗಳ ಜಿಲ್ಲಾ ಅಧಿಕಾರಿ ಗುರುರಾಜ ಮತ್ತು ಸಿಬ್ಬಂದಿ ಸೋಪನ್‌ರಾವ್ ಅವರು ವ್ಯಕ್ತಿಯೊಬ್ಬರಿಂದ 20 ಸಾವಿರ ರೂ. ಲಂಚ ಪಡೆಯುವಾಗ ಲೋಕಾ ಡಿಎಸ್‌ಪಿ ಮಂಜುನಾಥ್ ಹಾಗೂ ಇನ್ಸ್‌ಪೆಕ್ಟರ್ ಧ್ರುವತಾರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಬಲೆಗೆ ಬೀಳಿಸಿದ್ದಾರೆ.
ಪೆಟ್ರೋಲ್ ಪಂಪ್‌ಗೆ ಎನ್‌ಒಸಿ ನೀಡಲು 1 ಲಕ್ಷ ರೂ. ಬೇಡಿಕೆ ಇಟ್ಟಿದ್ದರು ಎಂದು ದೂರುದಾರ ಚಿತ್ತಾಪುರ ರಾಜರಾಮಪ್ಪ ನಾಯಕ ದೂರಿನಲ್ಲಿ ತಿಳಿಸಿದ್ದರು. ನಂತರ 20 ಸಾವಿರ ರೂ. ಪಡೆಯುವಾಗ ಕಚೇರಿಯಲ್ಲಿ ದಾಳಿ ಮಾಡಲಾಗಿದೆ. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಲೋಕಾ ಮೂಲಗಳು ತಿಳಿಸಿವೆ.
ಲೋಕಾ ಸಿಬ್ಬಂದಿ ಮಲ್ಲಿನಾಥ್, ಮಸೂದ್ ಇದ್ದರು.

ಪಿಡಬ್ಲೂಡಿ ಜೆಇ ಲೋಕಾ ವಶಕ್ಕೆ: ಪೆಟ್ರೋಲ್ ಪಂಪ್‌ಗೆ ಎನ್‌ಒಸಿ ನೀಡಲು ಲಂಚ ಪಡೆಯುತ್ತಿದ್ದ ಪಿಡಬ್ಲ್ಯುಡಿ ಇಲಾಖೆ ಜೆಇ ಖದೀರ್ ಪಟೇಲ್ ಕೂಡ ಲೋಕಾ ಬಲೆಗೆ ಬಿದ್ದಿದ್ದಾರೆ. ದೂರುದಾರನಿಂದ ಇವರು 25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಗರದಲ್ಲಿ ಹಣ ಪಡೆಯುವಾಗ ಲೋಕಾಯುಕ್ತ ಇನ್ಸ್‌ಪೆಕ್ಟರ್ ರಾಜಶೇಖರ ಹಳಗೋಧಿ ನೇತೃತ್ವದ ತಂಡ ದಾಳಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net