ಬೆಂಕಿಗೆ ಆಹುತಿಯಾದ ಭತ್ತದ ಹುಲ್ಲಿನ ಟ್ರ್ಯಾಕ್ಟರ್, ಇಬ್ಬರು ಪ್ರಾಣಾಪಯದಿಂದ ಪಾರು

250420 Chikalaparvi Paddy Grass Tractor Burn
Published on

ಮಾನ್ವಿ: ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಭತ್ತದ ಮೇವು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗೆ ಶನಿವಾರ ಬೆಂಕಿ ತಗುಲಿ, ಮೇವು ಸಮೇತ ಟ್ರ್ಯಾಕ್ಟರ್ ಸುಟ್ಟು ಕರಕಲಾಗಿದೆ. ಹೊಲದಲ್ಲಿನ ಮೇವು ಟ್ರ್ಯಾಕ್ಟರ್‌ನಲ್ಲಿ ಲೋಡ್ ಮಾಡಿಕೊಂಡು ಹೋಗುವ ವೇಳೆ ಘಟನೆ ನಡೆದಿದೆ. ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಟ್ರ್ಯಾಕ್ಟರ್ ಚಾಲಕ ಹಾಗೂ ಕೂಲಿಕಾರರು ಟ್ರ್ಯಾಕ್ಟರ್‌ನಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಅವಘಡದಿಂದ ರೈತ ಚನ್ನಬಸವ ಹೂಗಾರಗೆ ಅಪಾರ ನಷ್ಟವಾಗಿದೆ. ಆಗ್ನಿ ಶಾಮಕ ವಾಹನ ಸ್ಥಳಕ್ಕ ದಾವಿಸಿ ಬೆಂಕಿ ನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net