

ನಿಪ್ಪಾಣಿ: ಬೀಗ ಹಾಕಿದ್ದ ಮನೆಯಲ್ಲಿ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿ ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ಇಲ್ಲಿನ ಜತ್ರಾಟ್ ವೇಸ್‌ನಲ್ಲಿ ನಡೆದಿದೆ. ನಿವಾಸಿ ಗಣೇಶ ಪೋಳ ಗುರುವಾರ ಸಂಜೆ ಮನೆಗೆ ಬೀಗ ಹಾಕಿ ಸಂಬಂಧಿಕರ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆಯಲ್ಲಿ ಜೀವನೋಪಯೋಗಿ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಹೆಸ್ಕಾಂ ಇಂಜಿನಿಯರ್ ಅಕ್ಷಯ ಚೌಗಲಾ, ದಲಿತ ಕ್ರಾಂತಿ ಸೇನೆ ಅಧ್ಯಕ್ಷ ಅಶೋಕಕುಮಾರ ಅಸೋದೆ, ಎಎಸ್‌ಐ ಆರ್.ಜೆ. ಕುಂಬಾರ ಭೇಟಿ ನೀಡಿದರು.