ನೌಕಾನೆಲೆಯಲ್ಲಿ ಟಗ್ ಗೆ ಬೆಂಕಿ

20230810_145944
Published on

ಕಾರವಾರ: ಇಲ್ಲಿನ ಕದಂಬ ನೌಕಾನೆಲೆಯಲ್ಲಿ ಗುರುವಾರ ಬೆಂಕಿ ಅವಘಡ ಸಂಭವಿಸಿದೆ.

ಯುದ್ಧ ಹಡಗುಗಳನ್ನು ಕದಂಬ ನೌಕಾನೆಲೆಯಲ್ಲಿರುವ ರಿಪೇರಿ ಪ್ರಾಂಗಣ (ಡಾಕ್ ಯಾರ್ಡ್ ) ಗೆ ಎಳೆದು ತರುವ ತೇಜಸ್ ಎಂಬ ಟಗ್ ಬೋಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇಂಜಿನ್ ಸಮಸ್ಯೆಯಿಂದ ಬೆಂಕಿ ಹೊತ್ತಿದ್ದು, ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಈ ಸಂದರ್ಭದಲ್ಲಿ ಭಾರಿ ಹೊಗೆ ಆವರಿಸಿದೆ. ಟಗ್ ಗೆ ಹಾನಿಯಾಗಿದ್ದು, ಯಾರಿಗೂ ಪೆಟ್ಟಾಗಿಲ್ಲ ಎಂದು ನೌಕಾನೆಲೆ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net