ಬಂದರನ್ನು ಬೆಚ್ಚಿ ಬೀಳಿಸಿದ ಬೆಂಕಿಯ ಜ್ವಾಲೆ!

Fire-for-boat.
Published on

ಭಟ್ಕಳ: ತಾಲೂಕಿನ ಬಂದರಿನಲ್ಲಿ ಲಂಗರು ಹಾಕಿದ್ದ ದೋಣಿಯೊಂದಕ್ಕೆ ಭಾನುವಾರ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿದೆ.

ಬಂದರ ನಿವಾಸಿ ಗೋವಿಂದ ನರಸಿಂಹ ಖಾರ್ವಿ ಅವರ ಮಾಲಿಕತ್ವದ ಎಂಜಿಲಾ ಹೆಸರಿನ ದೋಣಿ ಬೆಂಕಿಗೆ ಆಹುತಿಯಾಗಿದೆ.

ಗೋವಿಂದ ಖಾರ್ವಿ ಅವರು ಎಂಜಿಲಾ ದೋಣಿಯನ್ನು ದೋಣಿವಿಹಾರ ನಡೆಸುವ ಸಲುವಾಗಿ ಖರೀದಿ ಮಾಡಿ ರಿಪೇರಿಗಾಗಿ  ಬಂದರಿನ ದಡದಲ್ಲಿ ಲಂಗರು ಹಾಕಿದ್ದರು.  ಪ್ರವಾಸೋದ್ಯಮದಡಿ   ವಾಯುವಿಹಾರ‌ದ ದೋಣಿಯನ್ನಾಗಿ ಮಾರ್ಪಾಡಿಸಲು ಅಂದಾಜು ಮೂರು ಲಕ್ಷದ ಸಾಮಾನುಗಳನ್ನ ತಂದು ದೋಣಿಯಲ್ಲಿ ಇರಿಸಿದ್ದರು. ಬೆಂಕಿಯ ಕೆನ್ನಾಲೆಗೆ ದೋಣಿಯ ಸಮೇತ ಎಲ್ಲವೂ ಸುಟ್ಟು ಕರಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಅಗಮಿಸಿ ಬೆಂಕಿಯನ್ನು ನಂದಿಸಿದ್ದು, ಲಕ್ಷಾಂತರ ರೂ. ನಿಯಾಗಿದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net