

ವಿಜಯವಾಣಿ ಸುದ್ದಿಜಾಲ ಸರ್ಜಾಪುರ
ಸರ್ಜಾಪುರದ ಡಾ.ಬಿ.ಆರ್.ಅಂಬೇಡ್ಕರ್ ಕಾಲನಿಯ ಯಲ್ಲಮ್ಮ ಎಂಬುವವರ ಮನೆಗೆ ಬೆಂಕಿ ತಗುಲಿ ಗೃಹ ಉಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ.
ಮೂರ ತಿಂಗಳ ಹಿಂದಷ್ಟೇ ಮನೆ ನಿರ್ಮಾಣ ಮಾಡಲಾಗಿತ್ತು. ಇದಕ್ಕಿದಂತೆ ಬೆಂಕಿ ತಗಲಿದೆ. ಅಕ್ಕ ಪಕ್ಕದ ಮನೆಯವರ ಸಹಾಯದಿಂದ ಮುಂಜಾನೆ ಬೆಂಕಿ ನಂದಿಸಲಾಗಿದೆ. ಮನೆಯವರೆಲ್ಲ ಸಂಬಂಧಿಕ ಮನೆಗೆ ತೆರಳಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ.
ನಾನು ಅಂಗವಿಕಲ ವೃದ್ಧೆ. ನನ್ನನ್ನು ನೋಡಿಕೊಳ್ಳಲು ಮಕ್ಕಳಿಲ್ಲ, ಏಕಾಂಗಿಯಾಗಿ ಜೀವನ ಮೂರು ತಿಂಗಳ ಹಿಂದೆ ಇದ್ದ ಜಾಗದಲ್ಲಿ ಸಾಲ ಮಾಡಿ ಮನೆ ಕಟ್ಟಿಕೊಂಡಿದ್ದೆ. ಮನೆಗೆ ಬೆಂಕಿ ಹೇಗೆ ತಗುಲಿತು ಎಂಬುದು ಗೊತ್ತಿಲ್ಲ. ಇದ್ದ ಮನೆಯೂ ಇಲ್ಲದಂತಾಗಿದ್ದು, ಬೀದಿಗೆ ಬಿದ್ದಿದ್ದೇನೆ ಎಂದು ಕಣ್ಣೀರಿಟ್ಟ ಯಲ್ಲಮ್ಮ, ಸರ್ಜಾಪುರ ಠಾಣೆಗೆ ದೂರು ನೀಡಿದ್ದಾರೆ.