ಅಕ್ಕಿ ಸಮೇತ ಲಾರಿ ಬೆಂಕಿಗೆ ಆಹುತಿ

26 TRUCK fire
Published on

 ವಿರಾಜಪೇಟೆ : ಅಕ್ಕಿ ತುಂಬಿಕೊಂಡು ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಲಾರಿಯೊಂದು ತಾಂತ್ರಿಕ ದೋಷದಿಂದ ಬೆಂಕಿಗೆ ಆಹುತಿಯಾದ ಘಟನೆ ರಾಜ್ಯ ಹೆದ್ದಾರಿ ಮಾಕೂಟ್ಟ ಅರಣ್ಯ ವಲಯದಲ್ಲಿ ಮಂಗಳವಾರ ನಡೆದಿದೆ.ಆಂಧ್ರದ ನೆಲ್ಲೂರಿನಿಂದ ಕೇರಳದ ಕಣ್ಣೂರಿಗೆ ಸರಕು ಸಾಗಣೆ ಮಾಡುತಿದ್ದ ಲಾರಿಯಲ್ಲಿ ಕಾಣಿಸಿಕೊಂಡ ಕಿಡಿ ಲಾರಿಯನ್ನೇ ಭಸ್ಮಮಾಡಿತು.

ಲಾರಿಯಲ್ಲಿ 21ಲಕ್ಷ ರೂ. ಮೌಲ್ಯದ ಅಕ್ಕಿ ಇತ್ತು. ವಾಹನ ವಿರಾಜಪೇಟೆ ನಗರ ಪೆರುಂಬಾಡಿ ಪೊಲೀಸ್ ತಪಾಸಣೆ ಕೇಂದ್ರದ ಮೂಲಕ ಮಾಕೂಟ್ಟ ಅರಣ್ಯ ವಲಯದ ಮೇಮನಕೊಲ್ಲಿ ಬಳಿ ಸಾಗುತ್ತಿತ್ತು. ಮುಂಜಾನೆ ಬೆಂಕಿ ಕಾಣಿಕೊಂಡ ಹಿನ್ನೆಲೆಯಲ್ಲಿ ಚಾಲಕ ಪುಸ್ತಾನ್ ಎಂಬಾತ ಕೆಳಗಿಳಿದು ದೋಷ ಪರಿಶೀಲನೆ ಮಾಡಿದರೂ ಫಲಕಾರಿ ಆಗಲಿಲ್ಲ. ಬೆಂಕಿ ತೀವ್ರತೆ ಹೆಚ್ಚಿದ ಪರಿಣಾಮ ಲಾರಿಯಲ್ಲಿದ್ದ ಸಾಮಗ್ರಿಗಳೆಲ್ಲವೂ ಸುಟ್ಟುಹೋದವು.ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net