

ಹರಪನಹಳ್ಳಿ: ತಾಲೂಕಿನ ಜಿ.ದಾದಾಪುರ ಗ್ರಾಮದ ರೈತ ನಾಗರಾಜ ಅವರ ಮೇವಿನ ಬಣವಿಗೆ ಮಂಗಳವಾರ ಬೆಂಕಿ ತಗಲಿ ಸುಟ್ಟಿದೆ. ಕಣದಲ್ಲಿ ಜಾನುವಾರುಗಳಿಗೆ ಸಂಗ್ರಹಿಸಿಟ್ಟಿದ್ದ ಬಣವಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿದೆ. ಇದನ್ನು ಕಂಡ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಆಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ದನಕರುಗಳಿಗಾಗಿ ಕಣದಲ್ಲಿ ಸಂಗ್ರಹಿಸಿಟ್ಟಿದ್ದ 5 ಟ್ರ್ಯಾಕ್ಟರ್ ಶೇಂಗಾ ಹೊಟ್ಟು, 3 ಎಕರೆಯ ಮೆಕ್ಕೆಜೋಳದ ಸೊಪ್ಪೆ, ತೊಗರಿ ಹೊಟ್ಟು ಬೆಂಕಿಗೆ ಸಂಪೂರ್ಣ ಸುಟ್ಟುಹೋಗಿದೆ.