ಜೋಳದ ಗೂಡಿಗೆ ಬೆಂಕಿ

benki
ಜೋಳದ ಗೂಡಿಗೆ ಬೆಂಕಿ ಹತ್ತಿರುವ ದೃಶ್ಯ.
Published on

ಇಳಕಲ್ಲ: ತಾಲೂಕಿನ ಹರಿಣಾಪುರ ಗ್ರಾಮದ ರೈತ ಮಲ್ಲಪ್ಪ ಸೋಮನಕಟ್ಟಿ ಅವರ 12 ಎಕರೆ ಜಮೀನಿನಲ್ಲಿ ಬೆಳೆದಿದ್ದ ಜೋಳ ಕಿತ್ತು ರಾಶಿ ಮಾಡಲು ಹಾಕಿದ್ದ ಗೂಡಿಗೆ ಬುಧವಾರ ರಾತ್ರಿ ಏಕಾಏಕಿ ಬೆಂಕಿ ಬಿದ್ದು ಸುಟ್ಟು ಕರಕಲಾಗಿದೆ.
ಬೆಳಗ್ಗೆಯಿಂದ ಸಂಜೆವರೆಗೆ ಹೊಲದಲ್ಲಿಯೇ ಇದ್ದ ದನಗಳನ್ನು ಊರಲ್ಲಿನ ಮನೆಗೆ ಹೊಡೆದುಕೊಂಡು ಹೋಗಿದ್ದಾಗ ಬೆಂಕಿ ಬಿದ್ದ ವಿಷಯ ತಡವಾಗಿ ಗೊತ್ತಾಗಿದೆ. ತಡ ರಾತ್ರಿ ಹೊಲಕ್ಕೆ ಹೋಗಿ ನೋಡಿದಾಗ ಜೋಳದ ತೆನೆ ಮತ್ತು ಮೇವು ಸುಟ್ಟು ಕರುಕಲಾಗಿದ್ದವು.
ಮೊದಲೇ ಬರದಿಂದ ಕಂಗೆಟ್ಟಿದ್ದ ನಮಗೆ 100 ಚೀಲ ರಾಶಿಯ ತೆನೆಗಳು ಮತ್ತು ಮೇವು ಸುಟ್ಟು ಭಸ್ಮವಾಗಿದ್ದರಿಂದ ನಮ್ಮ ಮತ್ತು ನಮ್ಮನ್ನು ನಂಬಿದ ದನಕರುಗಳ ಬದುಕು ಹೇಗೆ ಎಂಬುದು ಗೋಚರಿಸದಂತಾಗಿದೆ ಎಂದು ರೈತ ಮಲ್ಲಪ್ಪ ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net