ಮಣಿಪಾಲದಲ್ಲಿ ರೆಸ್ಟೋರೆಂಟ್ ಬೆಂಕಿಗಾಹುತಿ

Fire
Published on

ಉಡುಪಿ: ಮಣಿಪಾಲ ಪೇಟೆಯ ವಸತಿಗೃಹದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ವಸತಿಗೃಹದ ರೆಸ್ಟೋರೆಂಟ್ ಸಂಪೂರ್ಣ ಸುಟ್ಟು ಕರಕಲಾಗಿದೆ.

ಶುಕ್ರವಾರ ಬೆಳಗ್ಗಿನ ಜಾವ ಷಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು. ಕೆಲವೇ ಹೊತ್ತಿನಲ್ಲಿ ಇಡೀ ರೆಸ್ಟೋರೆಂಟ್ ಅನ್ನು ಬೆಂಕಿ ವ್ಯಾಪಿಸಿದೆ. ರೆಸ್ಟೋರೆಂಟ್ ಪೀಠೋಪಕರಣಗಳ ಜತೆಗೆ ಮದ್ಯದ ಬಾಟಲಿಗಳು ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net