ಕಣ್ಣೂರಿನಲ್ಲಿ ಭತ್ತದ ಗದ್ದೆಗೆ ಬೆಂಕಿ

IMG-20231227-WA0252
ಭತ್ತದ ಗದ್ದೆಗೆ ಬೆಂಕಿ ಬಿದ್ದಿರುವುದು.
Published on

ಆನಂದಪುರ: ಸಮೀಪದ ಕಣ್ಣೂರು ಗ್ರಾಮದಲ್ಲಿ ಬುಧವಾರ ಭತ್ತದ ಗದ್ದೆಗೆ ಬೆಂಕಿ ಬಿದ್ದು ಕಟಾವಾಗ ಬೇಕಾಗಿದ್ದ ಭತ್ತ ಮತ್ತು ಕಟಾವು ಮಾಡಿದ ಹುಲ್ಲು ಸುಟ್ಟು ಹೋಗಿದೆ. ಹುಚ್ಚಪ್ಪ ಅವರ 1.29 ಎಕರೆ ಗದ್ದೆಯಲ್ಲಿ ಕಟಾವಿಗೆ ಸಿದ್ಧವಾಗಿದ್ದ ಭತ್ತಕ್ಕೆ ಬೆಂಕಿ ತಗುಲಿದೆ. ಮಂಜಪ್ಪ ಅವರ 2.01 ಎಕರೆ ವಿಸ್ತೀರ್ಣದ ಕಟಾವು ಮಾಡಿ ಇಟ್ಟಿದ್ದ ಬಿಳಿ ಹುಲ್ಲು ಭಸ್ಮವಾಗಿದೆ. ಸಾಗರ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿ ಅಕ್ಕ ಪಕ್ಕದ ಗದ್ದೆಗಳಿಗೆ ಬೆಂಕಿಯ ಕೆನ್ನಾಲಿಗೆ ಚಾಚದಂತೆ ಕ್ರಮ ಕೈಗೊಂಡರು. ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹಾನಿಯನ್ನು ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net