

ನಾಪೋಕ್ಲು : ಇಲ್ಲಿಗೆ ಸಮೀಪದ ನಾಲಡಿ ಬೆಟ್ಟಕ್ಕೆ ಬುಧವಾರ ಬೆಟ್ಟಕ್ಕೆ ಬೆಂಕಿ ಬಿದ್ದಿದ್ದು ವ್ಯಾಪಕವಾಗಿ ಹೊತ್ತಿ ನೂರಾರು ಏಕ್ರೆ ಕಾಡು
ಬಸ್ಮವಾಗಿದೆ.ಕಕ್ಕಬೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಲಡಿ ಬೆಟ್ಟದ ಸಾಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ವಿಷಯ ಅರಿತ ಸ್ಥಳೀಯರು
ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ .ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಇದೀಗಾಗಲೇ ಸಣ್ಣ ಮರ ಗಿಡಗಳು ಸೇರಿದಂತೆ ನೂರಾರು ಏಕ್ರೆ ಕಾಡು ಸುಟ್ಟುಹೋಗಿದೆ. ಬಿಸಿಲಿನ ಝಳ ಹೆಚ್ಚಿದ್ದು ಬೆಂಕಿನಂದಿಸುವುದು ಕಷ್ಟಕರ ಈ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳ ತರಲು ಅಸಾಧ್ಯವಾಗಿದ್ದು ಬೆಕ್ಕಿನಂದಿಸುವ ಕಾರ್ಯ
ದುಸ್ತರವಾಗಿದೆ.ಬೆಂಕಿ ನಂದಿಸುವಿಕೆ ಕಾರ್ಯದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಪಟ್ಟರೂ ನಂದಿಸಲು
ಸಾಧ್ಯವಾಗಿಲ್ಲ.