ಮೆಣಸಿನಕಾಯಿ ತುಂಬಿದ್ದ ಲಾರಿಗೆ ಬೆಂಕಿ; ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ ರೈತ

menasu
Published on

ಬಳ್ಳಾರಿ: ಕಷ್ಟಪಟ್ಟು ಬೆಳೆದಿದ್ದ ಮೆಣಸಿನಕಾಯಿಯನ್ನು ಚೀಲಕ್ಕೆ ತುಂಬಿಸಿ ಲಾರಿಯಲ್ಲಿ ತೆಗೆದುಕೊಂಡು ಹೋಗವಾಗ, ಬೆಂಕಿ ಅವಘಡ ಸಂಭವಿಸಿರುವ ಘಟನೆ ಬಳ್ಳಾರಿಯ ಕುರುಗೋಡು ತಾಲೂಕಿನ ಏಳುಬೆಂಚೆ ಗ್ರಾಮದ ಬಳಿ ನಡೆದಿದೆ.

ವಿರೂಪಾಕ್ಷ ಸ್ವಾಮಿ ಹೆಸರಿನ ರೈತ ಬೆಳೆದಿದ್ದ ಮೆಣಸಿಕಾಯಿಯನ್ನು ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. 400 ಚೀಲ ಮೆಣಸಿನಕಾಯಿಯನ್ನು ಲಾರಿಯಲ್ಲಿ ತುಂಬಿಕೊಂಡು ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಲಾರಿಗೆ ಬೆಂಕಿ ತಗುಲಿದೆ. ಎಲ್ಲ ಚೀಲಗಳಿಗೆ ಬೆಂಕಿ ಹತ್ತಿ ಉರಿಯಲಾರಂಭಿಸಿದೆ. ತಕ್ಷಣ ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.

ವಿದ್ಯುತ್​ ತಂತಿ ತಗುಲಿರುವ ಕಾರಣದಿಂದಲೇ ಬೆಂಕಿ ಹತ್ತಿದೆ ಎನ್ನಲಾಗಿದೆ. ಆದರೆ ಅವಘಡಕ್ಕೆ ನಿಖರ ಕಾರಣವಿನ್ನು ತಿಳಿದುಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net