ಕೋಡಿಕೊಪ್ಪದಲ್ಲಿ ಹೊತ್ತಿ ಉರಿದ ಬಣವೆಗಳು

4Naregal4
ನರೇಗಲ್ಲ ಸಮೀಪದ ಕೋಡಿಕೊಪ್ಪ ಗ್ರಾಮದಲ್ಲಿ ಶನಿವಾರ ಬೆಂಕಿ ಅವಘಡ ಸಂಭವಿಸಿ ಎರಡು ಬಣವೆಗಳು ಸುಟ್ಟು ಭಸ್ಮವಾಗಿರುವುದು.
Published on

ನರೇಗಲ್ಲ: ಸಮೀಪದ ಕೋಡಿಕೊಪ್ಪ ಗ್ರಾಮದ ಪಿಎಸ್​ಎಸ್ ಶಾಲೆಯ ಮುಂಭಾಗದಲ್ಲಿ ಕಡಲೆ ಹೊಟ್ಟು ಹಾಗೂ ಜೋಳದ ಮೇವಿನ ಬಣವೆಗೆ ಶನಿವಾರ ಬೆಂಕಿ ತಗುಲಿದ್ದು ಸುಮಾರು 9 ಟ್ರ್ಯಾಕ್ಟರ್​ನಷ್ಟು ಹೊಟ್ಟು, ಮೇವು ಸುಟ್ಟಿದೆ.

ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ‘ವರ್ಷಪೂರ್ತಿ ದನಕರುಗಳ ಮೇವಿಗಾಗಿ ಸಂಗ್ರಹಿಸಿದ್ದ ಹೊಟ್ಟಿನ ಬಣವೆಗೆ ದುರುಳರು ಬೆಂಕಿ ಹಚ್ಚಿದ್ದಾರೆ. ಈ ಹಿಂದೆ ನಮ್ಮ ಜಮೀನಿನಲ್ಲಿ ಗೋದಿ ಹುಲ್ಲಿಗೂ ಬೆಂಕಿ ಹಾಕಿದ್ದರು. ಈಗ ಮತ್ತೆ ಬಣವೆಗೆ ಬೆಂಕಿ ಹಚ್ಚುವ ಮೂಲಕ ದುಷ್ಕೃತ್ಯವೆಸಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮೇವಿನ ಬಣವೆಗಳ ಮಾಲೀಕರಾದ ಮಂಜಪ್ಪ ಹೊಸಳ್ಳಿ, ಉಮೇಶಪ್ಪ ಹೆಬ್ಬಳ್ಳಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net