ನಿಂಬಳಗೆರೆ ಬಳಿ ಕಾಡಿಗೆ ಬೆಂಕಿ

Ujjini forest fire
ಉಜ್ಜಿನಿ ಸಮೀಪದ ನಿಂಬಳಗೆರೆ ಗ್ರಾಮದ ಬಳಿ ಕಾದಿಟ್ಟ ಅರಣ್ಯದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದು.
Published on

ಉಜ್ಜಿನಿ: ನಿಂಬಳಗೆರೆ ಗ್ರಾಮದ ಬಳಿಯ ಕಾದಿಟ್ಟ ಅರಣ್ಯದಲ್ಲಿ ಮಂಗಳವಾರ ರಾತ್ರಿ ಬೆಂಕಿ ಹತ್ತಿಕೊಂಡಿದೆ.

ನಿಂಬಳಗೆರೆಯಿಂದ ಹೊಸಹಳ್ಳಿ ಮಾರ್ಗದಲ್ಲಿ ನೂರಾರು ಎಕರೆ ಅರಣ್ಯ ಪ್ರದೇಶವಿದ್ದು, ಮಳೆಗಾಲದಲ್ಲಿ ಉತ್ತಮ ಮಳೆಯಿಂದಾಗಿ ಮೇವು ಬೆಳೆದಿದ್ದು ಪ್ರಸ್ತುತ ಒಣಗಿದೆ. ಮೇವಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಗಿಡ-ಮರಗಳು ಬೆಂಕಿಗೆ ಆಹುತಿಯಾಗಿವೆ. ಅರಣ್ಯದಲ್ಲಿ ಮೊಲ, ಉಡ, ಕಾಡು ಹಂದಿಗಳು ಸೇರಿದಂತೆ ಅನೇಕ ಪ್ರಾಣಿ-ಪಕ್ಷಿಗಳಿವೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟರು. ಸೂಲದಹಳ್ಳಿ ಭಾಗದಲ್ಲಿನ ಅರಣ್ಯದಲ್ಲೂ ಬೆಂಕಿ ಕಾಣಿಸಿಕೊಂಡಿದ್ದು, ಎಲ್ಲ ಕಡೆ ನಿಗಾ ವಹಿಸಲಾಗಿದೆ ಎಂದು ಅರಣ್ಯ ಸಿಬ್ಬಂದಿ ಗಿರೀಶ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net