ಶಿರಹಟ್ಟಿಯಲ್ಲಿ ಬಿಳಿ ಜೋಳ ಬೆಳೆ ಬೆಂಕಿಗಾಹುತಿ

FIRE
ಶಿರಹಟ್ಟಿ ಪಟ್ಟಣದ ವರವಿ ರಸ್ತೆ ಹತ್ತಿರ ಜಗನ್ನಾಥ ಹಣಗಿ ಎಂಬುವವರ ಜಮೀನಿನಲ್ಲಿ ಬೆಂಕಿ ತಗುಲಿ ಬಿಳಿಜೋಳ ಬೆಂಕಿಗಾಹುತಿಯಾಗಿರುವುದು.
Published on

ಶಿರಹಟ್ಟಿ: ಪಟ್ಟಣದ ವರವಿ ರಸ್ತೆ ಹತ್ತಿರದ ಜಮೀನಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಹಿಂಗಾರು ಬಿಳಿ ಜೋಳದ ಬೆಳೆ ಹಾನಿಯಾದ ಘಟನೆ ಶುಕ್ರವಾರ ಜರುಗಿದೆ.

ಜಗನ್ನಾಥ ಹಣಗಿ ಅವರ ನಾಲ್ಕು ಎಕರೆ ಹೊಲದಲ್ಲಿ ಜೋಳ ಬಿತ್ತನೆ ಮಾಡಿಲಾಗಿತ್ತು. ಕಟಾವು ಮಾಡಿ ಸಂಗ್ರಹಿಸಿದ ತೆನೆ ಸಹಿತ ಬಿಳಿಜೋಳಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಜಮೀನಿನಲ್ಲಿ ಇರುವ ಕೊಳವೆ ಬಾವಿಯ ಮೀಟರ್ ಬೋರ್ಡ್, ಪೈಪ್‌ಗಳು, ವಯರ್, ಮತ್ತು 20ಕ್ಕಿಂತ ಹೆಚ್ಚಿನ ಪೇರಲ ಗಿಡಗಳು ಬೆಂಕಿಗಾಹುತಿಯಾಗಿವೆ.

ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು. ಆದರೆ, ಅಷ್ಟೊತ್ತಿಗಾಗಲೇ ಅಪಾರ ಪ್ರಮಾಣದ ಬೆಳೆ, ತೆನೆ ಹಾಗೂ ಸೊಪ್ಪಿ ಸುಟ್ಟು ಕರಕಲಾಗಿದೆ. ಶಿರಹಟ್ಟಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಎಸ್.ಬಿ. ಶೇಗುಣಸಿ, ನಾಗರಾಜ ರಾಜಪೂರ, ಎಚ್.ವಿ. ಉದಯಕುಮಾರ, ಸುರೇಶ ನಾರಗಲ್ಲು, ಪ್ರೇಮಾನಂದ ಹಡಪದ, ಎಂ.ಸಿ. ಜಗದೀಶ, ವಾಲಿಕಾರ ಮೆಹಬೂಬ್, ಅಲಿ ಸನದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net