

ಕಾರ್ಕಳ: ಹಿರ್ಗಾನ ಹಾರ್ಜಡ್ಡು ಮಂಗಳಕಲ್ಲುವಿನಲ್ಲಿ ಮಾರುತಿ ಇಂಡಸ್ಟ್ರೀಸ್ ಗೇರುಬೀಜದ ಎಣ್ಣೆ ಕಾರ್ಖಾನೆ ಸೋಮವಾರ ತಡರಾತ್ರಿ 12 ಗಂಟೆ ಹೊತ್ತಿಗೆ ಬೆಂಕಿಗೆ ಆಹುತಿಯಾಗಿದೆ. ಅಗ್ನಿ ಶಾಮಕದಳದ ಸಿಬ್ಬಂದಿ ಸತತ 15 ಗಂಟೆ ನಡೆಸಿದ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ. ಬೆಂಕಿಯಿಂದ ಕಟ್ಟಡ ಸಂಪೂರ್ಣ ಹಾನಿಗೊಳಗಾಗಿದ್ದು, 40 ಟನ್ ಆಯಿಲ್, 35 ಟನ್ ಶೆಲ್‌ಕೇಕ್, ಒಂದುವರೆ ಲಕ್ಷ ಮೌಲ್ಯದ ಶೆಲ್ಸ್, 2 ಈಚರ್ ವಾಹನ, ಎಣ್ಣೆ ಸಂಸ್ಕರಣ, ಶೇಖರಣ ಘಟಕ, ವಿದ್ಯುತ್ ಉಪಕರಣ ನಾಶಗೊಂಡಿವೆ. ಕಾರ್ಕಳ ಹಾಗೂ ಉಡುಪಿಯ ಒಟ್ಟು 4 ಅಗ್ನಿಶಾಮಕ ವಾಹನಗಳು, 1 ಜೆಸಿಬಿ, 1 ಹಿಟಾಚಿ ಯಂತ್ರ ಬಳಸಿ ಬೆಂಕಿ ನಂದಿಸಲಾಯಿತು.