ಬೆಂಕಿಗೆ ರು.೧೦ ಲಕ್ಷಕ್ಕೂ ಹೆಚ್ಚು ಹಾನಿ

7 BK 1
ಬಸವಕಲ್ಯಾಣದ ಟೇಲರಿಂಗ್, ಮ್ಯಾಚಿಂಗ್ ಸೆಂಟರ್‌ನಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಬಟ್ಟೆ, ಬಳೆ, ಸ್ಟೋನ್ ಜ್ಯುವೆಲ್ಲರಿ, ಕಾಸ್ಮೆಟಿಕ್ಸ್ ಐಟಮ್, ರೇಷ್ಮೆ ಬಟ್ಟೆ, ಬೆಲೆಬಾಳುವ ಸೀರೆ, ಬ್ಲೌಸ್ ಪೀಸ್, ಫರ್ನಿಚರ್ ಸುಟ್ಟು ಕರಕಲಾಗಿವೆ.
Published on

ಬಸವಕಲ್ಯಾಣ: ನಗರದ ಟೇಲರಿಂಗ್, ಮ್ಯಾಚಿಂಗ್ ಸೆಂಟರ್‌ನಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಬಟ್ಟೆ, ಬಳೆ, ಸ್ಟೋನ್ ಜ್ಯುವೆಲ್ಲರಿ, ಕಾಸ್ಮೆಟಿಕ್ಸ್ ಐಟಮ್ ಸೇರಿ ೧೦ ಲಕ್ಷಕ್ಕೂ ಅಧಿಕ ಹಾನಿಯಾಗಿದೆ.

ಕೆಎಚ್‌ಬಿ ಕಾಲನಿ ರಸ್ತೆಯ ಶಾಂತಿನಿಕೇತನ ಶಾಲೆ ಸಮೀಪದ ಸುನೀತಾ ಬಿರಾದಾರ ಅವರ ಜೈ ರಾಧಾ ಮಹಾದೇವ ಲೇಡಿಸ್ ಟೇಲರಿಂಗ್ ಮ್ಯಾಚಿಂಗ್ ಸೆಂಟರ್ ಬೆಂಕಿಯಿಂದ ಹೊತ್ತಿ ಉರಿದಿದೆ. ಶಾಪ್‌ನಲ್ಲಿದ್ದ ಬಟ್ಟೆ, ಅಲಂಕಾರಿಕ ಬಳೆ, ಬ್ರ್ಯಾಡೆಡ್ ಸಾಮಗ್ರಿ, ರ‍್ಯಾಕ್ಸ್, ಹೊಲಿಗೆ, ಕಾಸ್ಮೆಟಿಕ್ಸ್ ಐಟಮ್ಸ್, ಪಿಕೋಫಾಲ್ ಯಂತ್ರ, ರೇಷ್ಮೆ ಬಟ್ಟೆ, ಬೆಲೆಬಾಳುವ ಸೀರೆ, ಬ್ಲೌಸ್ ಪೀಸ್, ಫರ್ನಿಚರ್ ಸುಟ್ಟು ಕರಕಲಾಗಿವೆ.

ಬೆಂಕಿ ಹೊತ್ತಿಕೊಂಡಿರುವುದನ್ನು ದಾರಿಯಲ್ಲಿ ಹೋಗುತ್ತಿದ್ದ ಜನ ಮಾಲೀಕರ ಗಮನಕ್ಕೆ ತಂದಿದ್ದರು. ಸುದ್ದಿ ತಿಳಿಯುತ್ತಲೇ ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಷ್ಟರಲ್ಲಿ ಬಹುತೇಕ ವಸ್ತುಗಳು ಸುಟ್ಟು ಹೋಗಿದ್ದವು. ಗ್ರಾಮ ಆಡಳಿತಾಧಿಕಾರಿ ರಾಜಶೇಖರ ಪಂಚನಾಮೆ ಮಾಡಿದ್ದಾರೆ. ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‌ಐ ಅಂಬರೀಶ್ ವಾಗ್ಮೋಡೆ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net