ಅಗ್ನಿ ಅವಘಡದಲ್ಲಿ 4 ಬೈಕ್ ಕರಕಲು

fire in a two-wheeler
fire in a two-wheeler
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ನಗರಸಭೆ ವ್ಯಾಪ್ತಿಯ ಅರಿಶಿಣಕುಂಟೆ ಸಮೀಪದ ಆದರ್ಶನಗರದಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು 4 ದ್ವಿಚಕ್ರ ವಾಹನಗಳು ಸುಟ್ಟಿದ್ದು, ಆದರ್ಶನಗರದ ನಿವಾಸಿ ಶ್ರೀಕಾಂತ್ ಶರ್ಮಾ ಗಾಯಗೊಂಡಿದ್ದಾರೆ.
ಶ್ರೀಕಾಂತ್ ಶರ್ಮಾ ಸಹೋದರ ವಿಕಾಸ್‌ಶರ್ಮಾ ವಾರದ ಹಿಂದೆ ಖರೀದಿ ಮಾಡಿದ್ದ ಎಲೆಕ್ಟ್ರಿಕ್ ಬೈಕ್‌ನಲ್ಲಿ ತಡರಾತ್ರಿ ಇದ್ದಕ್ಕಿದಂತೆ ಬೆಂಕಿ ಕಾಣಿಸಿಕೊಂಡು, ಹೊತ್ತಿ ಉರಿದಿದೆ. ಶ್ರೀಕಾಂತ್ ಮತ್ತು ಅವರ ತಾಯಿ ರೇಖಾಶರ್ಮ ಎಚ್ಚರಗೊಂಡು ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿದ್ದಾರೆ. ಈ ವೇಳೆ ಬೆಂಕಿ ಜ್ವಾಲೆ ಹೆಚ್ಚಾಗಿದ್ದರಿಂದ ಪಕ್ಕದಲ್ಲಿ ನಿಲ್ಲಿಸಿದ್ದ 4 ದ್ವಿಚಕ್ರವಾಹನಗಳು ಸುಟ್ಟಿದ್ದು, ಬೆಂಕಿ ನಂದಿಸುವ ವೇಳೆ ಶ್ರೀಕಾಂತ್ ಶರ್ಮ ಅವರಿಗೆ ಗಾಯವಾಗಿದೆ. ನಗರದ ಭಿನ್ನಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಪ್ಪಿದ ಬಾರಿ ಅನಾಹುತ: ತುಂಬಿದ್ದ ಅಡುಗೆ ಅನಿಲ ಸಿಲಿಂಡರ್ ಅವಘಡ ಸಂಭವಿಸಿದ ಸ್ಥಳದಲ್ಲಿತ್ತು. ಈ ವೇಳೆ ಶ್ರೀಕಾಂತ್ ಶರ್ಮ, ಸಿಲಿಂಡರ್ ಅನ್ನು ಮನೆ ಹೊರ ಭಾಗಕ್ಕೆ ತಂದು ಹಾಕಿದ್ದರಿಂದ ಬಾರಿ ಅನಾಹುತ ತಪ್ಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net