

ಯಲ್ಲಾಪುರ: ಪಟ್ಟಣದ ನಾಯಕನಕೆರೆಯ ಬಳಿ ಇರುವ ತೋಟಗಾರಿಕೆ ಇಲಾಖೆಯ ಜಾಗದಲ್ಲಿದ್ದ ಕರಡಕ್ಕೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ.
ಸುಮಾರು 70 ಎಕರೆ ವಿಸ್ತೀರ್ಣ ಹೊಂದಿದ ತೋಟಗಾರಿಕಾ ಇಲಾಖೆಯ ಸಸ್ಯೋದ್ಯಾನದಲ್ಲಿ ಎರಡೂವರೆ ಎಕರೆ ಪ್ರದೇಶದಲ್ಲಿ ಸಿಲ್ವರ್ ಗಿಡ ಹಚ್ಚಲಾಗಿದೆ. ಅಲ್ಲಿನ ಕರಡಕ್ಕೆ ಯಾರೋ ದುಷ್ಕರ್ಮಿಗಳು ಮಂಗಳವಾರ ಬೆಂಕಿ ಹಚ್ಚಿರಬಹುದೆಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಅರುಣ ಯು.ಎನ್. ತಿಳಿಸಿದ್ದಾರೆ. ಆಕಾಶದೆತ್ತರಕ್ಕೆ ಬೆಂಕಿ ಚಾಚುತ್ತಿರುವುದನ್ನು ಸ್ಥಳೀಯರು ಗಮನಿಸಿ, ಇಲಾಖೆಗೆ ತಿಳಿಸಿದ್ದಾರೆ. ನಂತರ ಅಗ್ನಿಶಾಮಕ ದಳದವರು ಬಂದು ಬೆಂಕಿ ಆರಿಸಿದ್ದಾರೆ.