ಅಗ್ನಿ ಅವಘಡ, 40 ಮಾವಿನ ಮರ ನಾಶ

Fire
Published on

ಕಕ್ಕೇರಿ: ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಪಂ ವ್ಯಾಪ್ತಿಯ ಚುಂಚವಾಡ ಗ್ರಾಮದ ರೈತ ಮಲ್ಲಪ್ಪ ಸಾಣಿಕೊಪ್ಪ ಅವರ ಒಂದು ಎಕರೆ ಭೂಮಿಯಲ್ಲಿದ್ದ ಸುಮಾರು 40ಕ್ಕೂ ಅಧಿಕ ಮಾವಿನ ಮರಗಳು ಆಕಸ್ಮಿಕ ಬೆಂಕಿ ತಗುಲಿ ಈಚೆಗೆ ಸುಟ್ಟು ಹೋಗಿದೆ.

ಗ್ರಾಮಲೆಕ್ಕಾಧಿಕಾರಿ ಮಂಜುನಾಥ ಸಂಗಮನವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕೊಡಿಸುವ ಭರವಸೆ ನೀಡಿದರು. ಜಮೀನಿನಲ್ಲಿ ಮಾವಿನ ಮರ ಬೆಳೆಸಿದ್ದು, 15 ವರ್ಷದಿಂದ ಪ್ರತಿವರ್ಷ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದೆ. ಈ ಬಾರಿಯೂ ಉತ್ತಮವಾಗಿ ಫಸಲು ಬಂದಿತ್ತು. ಆದರೆ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತ ಮಲ್ಲಪ್ಪ ಅಳಲು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net