ಹೋಟೆಲ್ ನಲ್ಲಿದ್ದ ಸಿಲಿಂಡರ್ ಲೀಕ್ ಆಗಿ ತಪ್ಪಿದ ಭಾರಿ ಅನಾಹುತ

IMG-20220824-WA0009.jpg
Published on

ಕೊಪ್ಪಳ: ಹೋಟೆಲ್ ನಲ್ಲಿದ್ದ ಸಿಲಿಂಡರ್ ಲೀಕ್ ಆಗಿ ಭಾರಿ ಅನಾಹುತ ತಪ್ಪಿದ ಘಟನೆ ನಗರದ ಗಡಿಯಾರ ಕಂಬದ ಬಳಿ ನಡೆದಿದೆ.


ಘಟನೆಯಲ್ಲಿ ಹೋಟೆಲ್ ಹಾಗೂ ಟೀ ಪಾಯಿಂಟ್ ಸುಟ್ಟು ಕರಕಲಾಗಿದ್ದು, ಹೋಟೆಲ್ ಮುಂಭಾಗವಿದ್ದ ಬೈಕ್ ಸಹ ಬೆಂಕಿಗಾಹುತಿಯಾಗಿದೆ. ರಾತ್ರಿ ಮನೆಗೆ ತೆರಳುವಾಗ ಸಿಲಿಂಡರ್ ಸರಿಯಾಗಿ ಬಂದ್ ಮಾಡದಿರುವುದು ಘಟನೆಗೆ ಕಾರಣವಾಗಿದೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಹೋಟೆಲ್ ಮೇಲ್ಭಾಗದ ಎರಡು ಮನೆಯಲ್ಲಿ ವಾಸ ಮಾಡ್ತಿದ್ದವರನ್ನು ತಕ್ಷಣ ರಕ್ಷಿಸಿದ್ದಾರೆ. ಬೆಳಂಬೆಳಗ್ಗೆ ದಟ್ಟವಾದ ಹೊಗೆ ಕಂಡು ಜನರು ಆತಂಕ್ಕೆ ಒಳಗಾಗಿದ್ದಾರೆ.


ಘಟನಾ ಸ್ಥಳಕ್ಕೆ ಕೊಪ್ಪಳ ತಹಸೀಲ್ದಾರ್ ವಿಠ್ಠಲ್ ಚೌಗಲೆ ಭೇಟಿ ನೀಡಿ ಪರಿಶೀಲಿಸಿದರು. ಕಟ್ಟಡದ ಮಾಲೀಕ ಗಂಗಾಧರ್ ಕಣ್ಣೀರು ಹಾಕಿದರು. ಇವರಿಗೂ ಸಣ್ಣ ಪುಟ್ಟ ಗಾಯವಾಗಿದೆ‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net