ಹುಲ್ಲಿನ ಮೆದೆಗೆ ಕಿಡಿಗೇಡಿಗಳಿಂದ ಬೆಂಕಿ

IMG_20241225_144107
Published on

ಗಂಡಸಿ: ಮಂಗಳವಾರ ರಾತ್ರಿ ಜಿ.ಹೊನ್ನೇನಹಳ್ಳಿ(ವಿಶಾಲನಗರ) ಗ್ರಾಮದಲ್ಲಿ ಕಿಡಿಗೇಡಿಗಳು ರಾಗಿ ಹುಲ್ಲಿನ ಮೆದೆಗೆ ಬೆಂಕಿ ಇಟ್ಟಿದ್ದು, 400 ಹೊರೆ ರಾಗಿ ಹುಲ್ಲು ಸುಟ್ಟು ಭಸ್ಮವಾಗಿದೆ.

ಜಿ.ಹೊನ್ನೇನಹಳ್ಳಿ ಗ್ರಾಮದ ಸಂಬೇಗೌಡ, ಶಿವರಾಜು, ಮಂಜುಳಮ್ಮ, ನವೀನ್ ಕುಮಾರ್ ತಮ್ಮ ಜಮೀನಿನಲ್ಲಿ ರಾಗಿಯನ್ನು ಕಟಾವು ಮಾಡಿಸಿ ಹುಲ್ಲಿನ ಹೊರೆಗಳನ್ನು ತಮ್ಮ ಮನೆಗಳ ಪಕ್ಕದಲ್ಲಿ ಹಾಕಿದ್ದರು. ಈ ಗ್ರಾಮದಲ್ಲಿ ಪ್ರತಿದಿನ ರಾತ್ರಿ 12ರಿಂದ ಬೆಳಗ್ಗೆ 6 ಗಂಟೆವರೆಗೆಗೆ ವಿದ್ಯುತ್ ಕಡಿತವಾಗಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು, ಈ ರೀತಿ ಕೃತ್ಯ ಎಸಗಿದ್ದಾರೆ. ಮೂತ್ರ ವಿಸರ್ಜನೆಗೆ ಹೊರಬಂದ ವ್ಯಕ್ತಿಯೊಬ್ಬರು ಬೆಂಕಿ ಕಂಡು ಚೀರಾಡಿ ಅಕ್ಕ ಪಕ್ಕದ ಮನೆಯವರನ್ನು ಎಬ್ಬಿಸಿದ್ದಾರೆ. ರಾತ್ರಿ 1 ಗಂಟೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಸಂಬಂಧ ಗಂಡಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net