

ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಣೆ ಮಡ್ರಾಸ್ ಬಳಿಯ ಪಟಾಕಿ ಅಂಗಡಿಯೊಂದರಲ್ಲಿ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡು ಪಟಾಕಿ ಅಂಗಡಿ ಹಾಗೂ ಪಕ್ಕದ ಮರದ ಮಿಲ್ಲಿನ ಫ್ಯಾಕ್ಟರಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಗೋಡಾನ್‌ನಿಂದ ಎಲ್ಲರು ಹೊರ ಬಂದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಪಟಾಕಿ ಸ್ಫೋಟ ಶಬ್ದಕ್ಕೆ ಸುತ್ತಮುತ್ತಲಿನ ಜನರು ಬೆಚ್ಚಿ ಬಿದ್ದಿದ್ದಾರೆ. ಗೋದಾಮಿನಲ್ಲಿ ಅಪಾರ ಪ್ರಮಾಣದಲ್ಲಿ ಪಟಾಕಿಗಳನ್ನು ಸಂಗ್ರಹಿಸಿ ಡಲಾಗಿತ್ತು. ಬೆಂಕಿಗೆ ಯಾವ ರೀತಿಯಲ್ಲಿ ಹೊತ್ತಿಕೊಂಡಿತು ಎಂಬುದು ತಿಳಿದು ಬಂದಿಲ್ಲ, ಈ ಕುರಿತು ತನಿಖೆಯಿಂದ ಮಾಹಿತಿ ಹೊರ ಬರಬೇಕಾಗಿದೆ.
ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ತೆರಳಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಪಟಾಕಿಗಳು ಏಕಕಾಲದಲ್ಲಿ ಸಿಡಿದ ಹಿನ್ನೆಲೆಯಲ್ಲಿ ಭಾರಿ ಶಬ್ದ ಹಾಗೂ ದಟ್ಟವಾದ ಹೊಗೆ ಸುತ್ತಮುತ್ತಲಿನ ವಾತಾವರಣವನ್ನು ಆವರಿಸಿಕೊಂಡಿತ್ತು. ಹೀಗಾಗಿ ಎಷ್ಟು ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುವಂತಾಯಿತು.
ನಗರದ ಬನ್ನಿಮಂಟಪ, ಸರಸ್ವತಿಪುರಂ, ಹೆಬ್ಬಾಳ್ ಹಾಗೂ ಆರ್‌ಬಿಐ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. 10ಕ್ಕೂ ಹೆಚ್ಚು ಫೈರ್ ಇಂಜಿನ್‌ಅನ್ನು ಬೆಂಕಿ ನಂದಿಸಲು ಬಳಕೆ ಮಾಡಲಾಯಿತು.