ಬೇಸಿಗೆ ಶಿಬಿರಾರ್ಥಿಗಳಿಗೆ ಅಗ್ನಿ ಅವಘಡದ ಪ್ರಾತ್ಯಕ್ಷಿಕೆ

nrd pratyakshike
Published on

ನರಗುಂದ: ಪಟ್ಟಣದ ಜ್ಞಾನಮುದ್ರಾ ಪಬ್ಲಿಕ್ ಶಾಲೆಯಲ್ಲಿ ಶಿಬಿರಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಗೆ ಅಗ್ನಿಶಾಮಕ ಮತ್ತು ಸುರಕ್ಷತೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.

ಬೆಂಕಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕುರಿತು ಅನೇಕ ಮಾಹಿತಿ ನೀಡಲಾಯಿತು.

ಬಟ್ಟೆಗಳಿಗೆ ಬೆಂಕಿ ಹೊತ್ತಿಕೊಂಡಲ್ಲಿ ಬೀಳಿಸಿ ಉರುಳಿಸಿ, ಕಿಟಕಿಯಿಂದ ಸಹಾಯಕ್ಕಾಗಿ ಕರೆ ಮಾಡಿ, ಬೆಂಕಿ ಹೊಗೆ ಹರಡುವುದನ್ನು ತಡೆಯಲು ಬಾಗಿಲುಗಳನ್ನು ಮುಚ್ಚಿ ಮುಂತಾದ ವಿವಿಧ ಅಂಶಗಳ ಕುರಿತು ಮಾಹಿತಿ ನೀಡಲಾಯಿತು.

ಅಗ್ನಿಶಾಮಕದಳದ ಅಧಿಕಾರಿ ಸಂದೀಪ ಬಸರಗಿ ಅವರ ನೇತೃತ್ವದಲ್ಲಿ ಶಾಲಾ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಗ್ನಿ ಅವಘಡ ಕುರಿತು ಉಪನ್ಯಾಸ ನೀಡಲಾಯಿತು.

ಅಗ್ನಿಶಾಮಕದಳ ಸಿಬ್ಬಂದಿಯ ತಿಮ್ಮರಡ್ಡಿ ಹೊಸಕೋಟೆ, ಮಲಿಕಸಾಬ್ ಭಾವಾಖಾನ್, ಡಿ.ಪಿ. ಇಮ್ಮನ್ನವರ, ತಾನಾಜಿ ಕರಾಡೆ, ಸಾಧಿಕಸಾಬ್ ಬೇಪಾರಿ, ಉಮೇಶ ರಾಮದುರ್ಗ, ಶಾಲಾ ಸಂಸ್ಥೆ ಅಧ್ಯಕ್ಷ ವಿ.ಜಿ. ಮಮಟಗೇರಿ, ಶಾಲಾ ಸಂಸ್ಥೆ ಉಪಾಧ್ಯಕ್ಷ ಸಿ.ಎನ್. ಮಂಟೂರ, ಕಾರ್ಯದರ್ಶಿ ಎ.ಸಿ. ವಿರಕ್ತಮಠ, ಎಸ್.ಎಸ್. ಹೊಸಕೇರಿಮಠ. ಮಂಜುನಾಥ ನಾಯಕ, ಅರವಿಂದ ಕುಲಕರ್ಣಿ, ಸಿದ್ದು ಪಟ್ಟದಕಲ್ಲ, ರಜೀಯಾಬೇಗಂ ಶೇಖ್, ಶ್ವೇತಾ ಹೊಸಪೇಠ, ತಾಯಪ್ಪ, ಸೌಜನ್ಯಾ ಚವಡಿ, ಅಶ್ವಿನಿ ಬೆನ್ನಿ, ಪಾಯಲ ಸಾಹುಕಾರ, ಅಭಿಲಾಷ ಹೂಗಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net