ಅಗ್ನಿ ದುರಂತದ ಅರಿವು ಜಾಗೃತಿ

23HD K00005
Published on

ಎಚ್.ಡಿ.ಕೋಟೆ: 

ಬೆಂಗಳೂರು ನಗರದ ಕಾರ್ಲ್ಟನ್ ಟವರ್‌ನಲ್ಲಿ 2010 ಫೆ.23ರಂದು ನಡೆದ ಅಗ್ನಿ ದುರಂತ ಘಟನೆ ದಿನವನ್ನು ಅಗ್ನಿ ಅವಘಡಗಳ ಅರಿವು ಹಾಗೂ ಅಗ್ನಿ ಅನಾಹುತ ತಡೆಗಟ್ಟುವ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಅಗ್ನಿಶಾಮಕ ಠಾಣಾಧಿಕಾರಿ ಎಂ.ಜೆ. ಸೋಮಣ್ಣ ತಿಳಿಸಿದರು.

ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಆವರಣದಲ್ಲಿ ಭಾನುವಾರ ಸಾರ್ವಜನಿಕರಿಗೆ ಅಗ್ನಿ ಶಮನದ ಬಗ್ಗೆ ಅರಿವು ಮೂಡಿಸಿ ಮಾತನಾಡಿದರು. ಅಗ್ನಿ ದುರಂತದಲ್ಲಿ 9 ಸಾರ್ವಜನಿಕರು ಹಾಗೂ ರಾಜ್ಯದ ಇನ್ನಿತರ ಅಗ್ನಿ ಅವಘಡಗಳಲ್ಲಿ ಮೃತಪಟ್ಟ ಸಾರ್ವಜನಿಕರ ಆತ್ಮಕ್ಕೆ ಶಾಂತಿ ಕೋರವ ಸಲುವಾಗಿ ಪ್ರತಿವರ್ಷ ಅಗ್ನಿಶಾಮಕ ಇಲಾಖೆಯು ಫೆ. 23ರಂದು ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ಅನಾಹುತ ತಡೆಗಟ್ಟುವ ದಿನವನ್ನು ರಾಜ್ಯಾದ್ಯಂತ ಆಚರಿಸಲಾಗುತ್ತದೆ ಎಂದರು.

ಅಗ್ನಿಶಾಮಕ ಸಿಬ್ಬಂದಿ ಅಶೋಕ್, ಪುಂಡಲೀಕ ಲಮಾಣಿ, ಹೇಮಂತ್ ಕುಮಾರ್, ಸುನಿಲ್ ಕುಮಾರ್, ಬಾಲಕೃಷ್ಣ, ಯಲ್ಲಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net