ಬೆಂಕಿಗೆ ಕಾಫಿ ತೋಟ ಭಸ್ಮ

30SPT2
ಸೋಮವಾರಪೇಟೆ ಸಮೀಪದ ಕಲ್ಕಂದೂರು ಗ್ರಾಮದ ಧನಂಜಯ ಎಂಬುವವರ ಕಾಫಿ ತೋಟಕ್ಕೆ ಬೆಂಕಿ ತಗಲಿ ನಷ್ಟವಾಗಿರುವುದು.
Published on

ಸೋಮವಾರಪೇಟೆ: ಸಮೀಪದ ಕಲ್ಕಂದೂರು ಗ್ರಾಮದ ಧನಂಜಯ ಎಂಬುವವರ ಕಾಫಿ ತೋಟಕ್ಕೆ ಬೆಂಕಿ ತಗಲಿ ಸುಮಾರು ಎರಡು ಎಕರೆ ತೋಟದಲ್ಲಿ ಕಾಫಿ, ಮೆಣಸು ಮತ್ತು ಬಾಳೆ ಗಿಡಗಳು ಸುಟ್ಟು ಹೋಗಿವೆ. ತೋಟಕ್ಕೆ ಬೆಂಕಿ ತಗಲಿದ್ದನ್ನು ಗಮನಿಸಿದ ಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಯಶಸ್ವಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net