

ಹನೂರು: ತಾಲೂಕಿನ ಅಜ್ಜೀಪುರ ಗ್ರಾಮದ ಜಮೀನೊಂದರಲ್ಲಿ ಸೋಮವಾರ ಬೆಂಕಿ ತಗುಲಿ 8 ತೆಂಗಿನ ಮರಗಳು ನಾಶವಾಗಿವೆ.
ಗ್ರಾಮದ ರಾಮುನಾಯ್ಕ ಎಂಬುವರ ಜಮೀನಿನ ತೆಂಗಿನ ಮರಗಳಿಗೆ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಕ್ಕಪಕ್ಕದ ಜಮೀನಿನವರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲಲ್ಲಿ 8 ತೆಂಗಿನ ಮರಗಳು ನಾಶವಾಗಿದ್ದು, ಬೆಂಕಿಯನ್ನು ನಂದಿಸುವುದರ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಪ್ರವೀಣ್, ರವಿ, ಮುನಿಶಾಂತ ಹಾಗೂ ನಾಗೇಶ್ ಭಾಗವಹಿಸಿದ್ದರು.