ಬೆಂಕಿ ತಗುಲಿ ಅಡಕೆ ಗಿಡಗಳಿಗೆ ಹಾನಿ

fire
Published on

ಹಿರೇಕೆರೂರ: ಬೆಂಕಿ ತಗುಲಿದ ಪರಿಣಾಮ ಫಸಲಿಗೆ ಬಂದಿದ್ದ ಅಡಕೆ ಗಿಡಗಳಿಗೆ ಹಾನಿಯಾದ ಘಟನೆ ಪಟ್ಟಣದ ಹೊರವಲಯದ ಶಿರಾಳಕೊಪ್ಪ ರಸ್ತೆಯ ಬದಿ ಶುಕ್ರವಾರ ನಡೆದಿದೆ. ಪಟ್ಟಣದ ಸೋಮು ಬಸವಣ್ಣೆಪ್ಪ ಜೋಳದ ಅವರಿಗೆ ಸೇರಿದ 3 ಎಕರೆಯಲ್ಲಿ ಬೆಳೆದಿದ್ದ ಅಡಕೆ ಗಿಡಗಳಿಗೆ ಹಾನಿಯಾಗಿದೆ.

ಶುಕ್ರವಾರ ಬೆಳಗ್ಗೆ 11 ಗಂಟೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿತ್ತು. ಸ್ಥಳೀಯರೊಂದಿಗೆ ರೈತ ಸೋಮು ಬೆಂಕಿ ನಂದಿಸಲು ಹರಸಾಹಸಪಟ್ಟರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿತು. ಅಷ್ಟೊರೊಳಗೆ 1.5 ಎಕರೆ ಅಡಕೆ ಗಿಡಗಳು ಬೆಂಕಿಗೆ ಆಹುತಿಯಾಗಿದ್ದವು.

ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾನಿ ಪರಿಶೀಲಿಸಿ, ಸೂಕ್ತ ಪರಿಹಾರ ಒದಗಿಸುವಂತೆ ರೈತರಾದ ಸೋಮು ಜೋಳದ, ಚಂದ್ರು ಜೋಳದ, ರವಿ ಮಾಳಗಿಮನಿ, ರಾಘವೇಂದ್ರ ಚಿಂದಿ, ಲೋಕೇಶ ಕಮಡೊಳ್ಳಿ, ಗಿರೀಶ ಬಿಳಿಕಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net