ಪಟಾಕಿ ಕಿಡಿ ತಗುಲಿ ರಾಸಾಯನಿಕ ಸ್ಫೋಟ, ದಂಪತಿಗೆ ಗಾಯ

Fire 21 April 20
Published on

ಕೋಟ: ಶಿರಿಯಾದ ಗ್ರಾಮದ ಪಡುಮುಂಡು ಎಂಬಲ್ಲಿ ಶನಿವಾರ ಮನೆಯೊಂದರಲ್ಲಿ ಇರಿಸಿದ್ದ ಕಲ್ಲು ಕ್ವಾರಿಯಲ್ಲಿ ಬಳಸುವ ರಾಸಾಯನಿಕ ವಸ್ತುವಿಗೆ ಪಟಾಕಿ ಕಿಡಿ ತಗುಲಿ ಸಿಡಿದ ಪರಿಣಾಂ ದಂಪತಿ ಗಾಯಗೊಂಡಿದ್ದಾರೆ.

ಪಡುಮುಂಡು ನಿವಾಸಿ ದಿನೇಶ್ ಶೆಟ್ಟಿ(50) ಹಾಗೂ ಅವರ ಪತ್ನಿ ವಸಂತಿ ಶೆಟ್ಟಿ ಗಾಯಗೊಂಡವರು. ದಿನೇಶ್ ಶೆಟ್ಟಿ ತೀವ್ರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಟಾಕಿ ಸಿಡಿಸುವ ವೇಳೆ ಅದರ ಕಿಡಿ ಹಾರಿ ಕಾರಿನ ಶೆಡ್‌ನಲ್ಲಿ ಇರಿಸಿದ್ದ ಕಲ್ಲು ಕ್ವಾರಿಯಲ್ಲಿ ಬಳಸುವ ರಾಸಾಯನಿಕ ವಸ್ತುವಿಗೆ ತಗಲಿತ್ತೆನ್ನಲಾಗಿದೆ. ಇದರಿಂದ ರಾಸಾಯಿನಿಕ ಸ್ಫೋಟಗೊಂಡು ದಂಪತಿ ಗಾಯಗೊಂಡರು. ಅಲ್ಲದೆ ಶೆಡ್‌ನಲ್ಲಿ ಇರಿಸಿದ್ದ ಕಾರಿನ ಮುಂಭಾಗ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net