ಅಗ್ನಿನಿಯಂತ್ರಕ ಸಾಧನ ಅಳವಡಿಸಿ

21mnv01
Published on

ಮಾನ್ವಿ: ಆಗ್ನಿ ದುರಂತ ನಡೆದಾಗ ಸಮೀಪದ ಆಗ್ನಿಶಾಮಕ ಕಚೇರಿಗೆ ಮಾಹಿತಿ ನೀಡಿದರೆ ಅನಾಹುತ ತಪ್ಪಿಸಬಹುದು ಎಂದು ಅಗ್ನಿಶಾಮಕ ಠಾಣಾಧಿಕಾರಿ ರಂಗಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ ಆವರಣದಲ್ಲಿ ಐಟಿಐ ಅಗ್ನಿಶಾಮಕ ಇಲಾಖೆಯಿಂದ ಆಯೋಜಿಸಿದ್ದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ನಮ್ಮ ನಿರ್ಲಕ್ಷೃದಿಂದ ಆಗ್ನಿ ದುರಂತ ನಡೆಯುತ್ತವೆ. ಹೀಗಾಗಿ ಪ್ರತಿಯೊಂದು ಕಾರ್ಯವನ್ನು ಎಚ್ಚರಿಕೆಯಿಂದ ನಿರ್ವಹಿಸಿದರೆ ದುರಂತಗಳು ನಡೆಯುವುದಿಲ್ಲ ಎಂದರು.

ಅನಿಲ, ಪೆಟ್ರೋಲಿಯಂ, ರಾಸಾಯನಿಕ, ವಿದ್ಯುತ್ ಸೇರಿದಂತೆ ವಿವಿಧ ಕಾರಣಗಳಿಂದ ಅಗ್ನಿ ಅನಾಹುತ ಸಂಭವಿಸಿದಾಗ ಪ್ರತ್ಯೇಕ ವಿಧಾನಗಳಿಂದ ನಿಯಂತ್ರಿಸಲಾಗುತ್ತದೆ. ಪ್ರತಿಯೊಂದು ವಾಣಿಜ್ಯ ಮಳಿಗೆ, ಕಚೇರಿಗಳಲ್ಲಿ ಕಡ್ಡಾಯವಾಗಿ ಅಗ್ನಿನಿಯಂತ್ರಕ ಸಾಧನಗಳನ್ನು ಅಳವಡಿಸಬೇಕು. ಇದರಿಂದ ಬೆಂಕಿ ಹೆಚ್ಚು ಪ್ರದೇಶಗಳಿಗೆ ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ. ಬೇಸಿಗೆಯಲ್ಲಿ ಹೆಚ್ಚಾಗಿ ಮೇವಿನ ಬಣವೆ, ಗುಡಿಸಲು, ಹತ್ತಿ ದಾಸ್ತನು ಕೋಣೆಗಳಲ್ಲಿ ಬೆಂಕಿ ಅನಾಹುತ ಸಂಭವಿಸುವುದರಿಂದ ಹೆಚ್ಚಿನ ಜಾಗ್ರತೆ ವಹಿಸಿದಲ್ಲಿ ಅನಾಹುತ ಸಂಭವಿಸದಂತೆ ತಡೆಯಲು ಸಾಧ್ಯ ಎಂದು ರಂಗಪ್ಪ ತಿಳಿಸಿದರು. ಕಾಲೇಜಿನ ತರಬೇತುದಾರರಾದ ವೀರೇಶ, ಬಸವರಾಜ ನಸ್ಲಾಪೂರ್, ವೀರೇಂದ್ರ, ಪ್ರಶಾಂತ, ಸುನಿತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net