ಬೆಂಕಿ ಅವಘಡಕ್ಕೆ ಇಬ್ಬರು ಬಾಲಕರ ದುರ್ಮರಣ

IMG_20220824_121543.jpg
Published on

ಕೊಪ್ಪಳ: ಕುಕನೂರು ತಾಲೂಕಿನ ಕೋಮಲಾಪೂರದಲ್ಲಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡಕ್ಕೆ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ.


ಜಯರಾಜ (8) ಹಾಗೂ ವಿನೋದ ರಾಜ (11) ಮೃತ ದುರ್ದೈವಿಗಳು. ಹನುಮಪ್ಪ ಅಬ್ಬಿಗೇರಿ ಎಂಬುವವರು ಮನೆಯಲ್ಲಿಯೇ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ‌. ಮಂಗಳವಾರ ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ‌. ತಕ್ಷಣ ಗಮನಕ್ಕೆ ಬಂದಿಲ್ಲ. ಮನೆಯಲ್ಲಿನ ವಸ್ತುಗಳಿಗೆ ಬೆಂಕಿ ಆವರಿಸಿದೆ. ದಟ್ಟ ಹೊಗೆ ಆವರಿಸಿದಾಗ ಮನೆಯಲ್ಲಿದ್ದ ತನ್ನ ಮೂರು ಮಕ್ಕಳನ್ನು ಹನುಮಪ್ಪ ಅಬ್ಬಿಗೇರಿ ರಕ್ಷಿಸಲು ಮುಂದಾಗಿದ್ದಾರೆ.


ಮೊದಲು 8 ವರ್ಷದ ಮಗು ಶಂಕರರಾಜನನ್ನು ಹೊರಕ್ಕೆ ಎತ್ತಿಕೊಂಡು ಬಂದಿದ್ದಾರೆ. ಬಳಿಕ 11 ವರ್ಷದ ವಿನೋಧರಾಜನನ್ನು ಹೊರ ತರಲಾಗಿದೆ. ಈ ವೇಳೆಗಾಗಲೇ ಬಾಲಕಗೆ ಸುಟ್ಟು ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬ ಮಗು 8ವರ್ಷದ ಜಯರಾಜನನ್ನು ರಕ್ಷಿಸುವ ಹೊತ್ತಿಗೆ ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಬಾಲಕ ಜಯರಾಜ ಬೆಂಕಿಯಲ್ಲಿ ಬೆಂದು ಮೃತಪಟ್ಟಿದ್ದಾನೆ.


ಚಿಕಿತ್ಸೆಗೆಂದು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಾಗಿದ್ದ ವಿನೋದರಾಜ ಸಹ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ‌.  ಮಕ್ಕಳನ್ನು ಕಳೆದುಕೊಂಡ ಪಾಲಕರ ರೋಧನ ನೋಡುಗರ ಮನ ಕಲಕುವಂತಿತ್ತು. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಇಒ ರಾಮಣ್ಣ ದೊಡ್ಮನಿ ಹಾಗು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ವರದಿ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net