

ನಾಪೋಕ್ಲು: ಇಲ್ಲಿಗೆ ಸಮೀಪದ ಕೈಕಾಡು ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಗದ್ದೆಯಲ್ಲಿ ಬೆಳೆಯಲಾಗಿದ್ದ ಭತ್ತದ ಹಾಗೂ ಹುಲ್ಲು ಸುಟ್ಟು ಕರಕಲಾಗಿದೆ. ನಡೆದಿದೆ.
ಯಂತ್ರದ ಸಹಾಯದಿಂದ ಭಾನುವಾರ ಸಂಜೆ ಗ್ರಾಮದ ಮಾಜಿ ಸೈನಿಕ ಕುಲ್ಲಚೆಟ್ಟಿ ನಾಣಯ್ಯ ತಮ್ಮ ಮನೆಯಂಗಳದಲ್ಲಿ ಭಾನುವಾರ ಕಾರ್ಮಿಕರು ಭತ್ತ ಒಕ್ಕಲು ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಅಪಾರ ಪ್ರಮಾಣದ ಭತ್ತ ಮತ್ತು ಹುಲ್ಲು ನಷ್ಟವಾಗಿದೆ. ಜತೆಗೆ ಶೆಡ್ ನಲ್ಲಿದ್ದ ಕಾರು ಸಹ ಬೆಂಕಿಯಿಂದ ಹಾನಿಗೊಳಗಾಗಿದೆ. ತಕ್ಷಣ ಮಾಹಿತಿ ತಿಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ.