ಅನಿಲ ಸೋರಿಕೆಯಿಂದ ಬೆಂಕಿ ಅವಡ

Untitled-2
Published on

ಹೊಸೂರು: ಹೊಸೂರಿನ ಖಾಸಗಿ ಕಂಪನಿಗೆ ಅನಿಲ ಪೂರೈಸುವ ಪೈಪ್​ಲೈನ್​ ಸೋರಿಕೆಯಾಗಿ ಶುಕ್ರವಾರ ಸಂಜೆ ಸಿಪ್​ಕಾಟ್​ ಬಳಿ ಬೆಂಕಿ ಅವಡ ಸಂಭವಿಸಿದೆ. ಕರ್ನಾಟಕ ಗಡಿಯಲ್ಲಿರುವ ಅತ್ತಿಪಲ್ಲಿ&ಹೊಸೂರು ಮಾರ್ಗದ ಸಿಪ್​ಕಾಟ್​ ಪ್ರದೇಶದ ಖಾಸಗಿ ಕಂಪನಿಗೆ ಅನಿಲ ಸಾಗಿಸುವ ಪೈಪ್​ಲೈನ್​ ಮೂಲಕ ಶುಕ್ರವಾರ ಸಂಜೆ ಅನಿಲ ಸೋರಿಕೆಯಾಗಿದ್ದು, ಸ್ಫೋಟದ ಶಬ್ದದೊಂದಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತು. ಕೂಡಲೇ ವಿಷಯ ತಿಳಿದ ಹೊಸೂರು ಅಗ್ನಿಶಾಮಕ ಇಲಾಖೆ ಮತ್ತು ಸಿಪ್​ಕಾಟ್​ ಪೊಲೀಸರು ಪೈಪ್​ಗಳಲ್ಲಿ ಅನಿಲ ಪೂರೈಕೆ ತಡೆದು, ಸಂಚಾರ ಸ್ಥಗಿತಗೊಳಿಸಿ, ವಿದ್ಯುತ್​ ಸಂಪರ್ಕ ಕಡಿತಗೊಳಿಸಿ, ಬೆಂಕಿಯನ್ನು ನಂದಿಸಿದರು. ಹಾನಿಯಾದ ಪೈಪ್​ಲೈನ್​ ಮೇಲೆ ಜೆಸಿಬಿ ಮೂಲಕ ಮಣ್ಣು ಸುರಿಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net