ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಮೂರೂವರೆ ಎಕರೆ ಬೆಳೆ ಭಸ್ಮ

Published on

ಯಳಂದೂರು: ಸಮೀಪದ ಹೆಗ್ಗವಾಡಿಪುರ ಗ್ರಾಮದಲ್ಲಿ ರೈತರೊಬ್ಬರಿಗೆ ಸೇರಿದ ಜಮೀನಿನಲ್ಲಿ ಗುರುವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಟಾವಿಗೆ ಬಂದಿದ್ದ ಮೂರೂವರೆ ಎಕರೆ ಕಬ್ಬು ಸುಟ್ಟು ಭಸ್ಮವಾಗಿದೆ.

ಕಾವುದವಾಡಿ ಗ್ರಾಮದ ನಿವಾಸಿ ಮಂಜುನಾಥ ಎಂಬುವರಿಗೆ ಸೇರಿದ ಸರ್ವೇ 140/01ರಲ್ಲಿ 3 ಎಕರೆ 18 ಗುಂಟೆ ಜಮೀನಿದ್ದು ಇದರಲ್ಲಿ ಇವರು ಕಬ್ಬು ಬೆಳೆದಿದ್ದರು. ಇವರ ಜಮೀನಿನಲ್ಲೇ ವಿದ್ಯುತ್ ತಂತಿ ಹಾದು ಹೋಗಿದ್ದು ಗಾಳಿಗೆ ವಿದ್ಯುತ್ ತಂತಿಗಳು ಘರ್ಷಿಸಿ ಕಿಡಿ ಬಂದಿದ್ದರಿಂದ ಇದು ಒಣಗಿದ್ದ ಕಬ್ಬಿನ ಸೋಗಿಗೆ ತಗುಲಿ ಬೆಂಕಿ ಬಿದ್ದಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯನ್ನು ನಿಂದಿಸಲು ಯತ್ನಿಸಿದರೂ ಅಷ್ಟೊತ್ತಿಗಾಗಲೇ ಇಡೀ ಕಬ್ಬು ಸುಟ್ಟು ಭಸ್ಮವಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕಾನೂನು ಕ್ರಮ ವಹಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net