ಎಪಿಎಂಸಿ ಆವರಣದಲ್ಲಿ ಶೆಡ್‌ಗೆ ಬೆಂಕಿ

Fire breaks out in shed on APMC premises
Published on

ಮಹಾಲಿಂಗಪುರ: ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಶೆಡ್‌ಗೆ ಬೆಂಕಿ ತಗುಲಿ ಅದರಲ್ಲಿದ್ದ ಹಳೇ ಸಾಮಗ್ರಿ ಭಸ್ಮಗೊಂಡಿವೆ.

ಘಟನೆಯ ಮಾಹಿತಿ ತಲುಪುತ್ತಿದ್ದಂತೆ ಬನಹಟ್ಟಿಯ ಅಗ್ನಿಶಾಮಕ ದಳದವರು ಹಾಗೂ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆಯ ನೀರಿನ ಟ್ಯಾಂಕರ್‌ನೊಂದಿಗೆ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಮೂಲಕ ಭಾರಿ ಅನಾಹುತ ಆಗುವುದನ್ನು ತಪ್ಪಿಸಿದರು.

ಬೆಂಕಿಗೆ ಆಹುತಿಯಾದ ಶೆಡ್ ಪಿ.ಜಿ.ಅಂಗಡಿ ಹೆಸರಿನ ಅಡತಿಗೆ ಸೇರಿದೆ. ಅದರಲ್ಲಿ ಕಟ್ಟಿಗೆ ಮತ್ತು ಹಳೆಯ ವಸ್ತುಗಳನ್ನು ಇಡಲಾಗಿತ್ತು. ಶೆಡ್‌ನ ಪಕ್ಕದಲ್ಲಿ ಗೋದಾವರಿ ಸಕ್ಕರೆ ಕಾರ್ಖಾನೆಗೆ ಸೇರಿದ ಗೋಡಾವನ ಹಾಗೂ ಪಿ.ಜಿ.ಅಂಗಡಿ ಅವರ ಅಡತ್ ಶಾಪ ಇದೆ. ಗೋಡಾವನ ಹಾಗೂ ಅಡತ್‌ಗೆ ಬೆಂಕಿ ತಗುಲದಂತೆ ಅಗ್ನಿಶಾಮಕ ದಳದವರು ನೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net