ಅಡಕೆ ತೋಟ, ಭತ್ತದ ಗೊಣಬೆಗೆ ಬೆಂಕಿ

6 SDP 5
Published on

ಸಿದ್ದಾಪುರ: ತಾಲೂಕಿನ ನಿಲ್ಕುಂದ ಗ್ರಾಪಂ ವ್ಯಾಪ್ತಿಯ ಮುಳಗುಂದ ದನ್ನಳ್ಳಿಯಲ್ಲಿ ಅಡಕೆ ತೋಟಕ್ಕೆ ಹಾಗೂ ಭತ್ತದ ಗೊಣಬೆಗೆ ಬೆಂಕಿ ಬಿದ್ದು ಅಪಾರ ಹಾನಿ ಸಂಭವಿಸಿದ ಘಟನೆ ಗುರುವಾರ ನಡೆದಿದೆ.

ಮುಳಗುಂದ ದನ್ನಳ್ಳಿಯ ವಿಶ್ವನಾಥ ಸುಬ್ರಾಯ ಹೆಗಡೆ ಅವರ ಭತ್ತದ ಗದ್ದೆಯ ಗೊಣಬೆ ಹಾಕಿಟ್ಟ 30 ರಿಂದ 40 ಚೀಲ ಭತ್ತ ಹಾಗೂ ಹುಲ್ಲು ಸಂಪೂರ್ಣ ಸುಟ್ಟು ಕರಕಲಾಗಿದೆ.

ಅದರಂತೆ ಗಣಪತಿ ಪರಮೇಶ್ವರ ಹೆಗಡೆ ದನ್ನಳ್ಳಿ ಅವರ ಅಡಕೆ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋಗಿದೆ. ತಾಲೂಕಿನ ಹಲಗೇರಿ ಗ್ರಾಮದ ಹುಸೂರಿನ ಅಬ್ದುಲ್ ಖಾದರ ಅಶ್ರಫ್ ಅವರ ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋಗಿ ಅಂದಾಜು ಮೂರು ಲಕ್ಷದಷ್ಟು ಹಾನಿ ಸಂಭವಿಸಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net