ಗಾಂಧಿ ಚೌಕ್ ಠಾಣೆ ಆವರಣದಲ್ಲಿ ಅಗ್ನಿ ಅವಘಡ-ವಾಹನಗಳು ಭಸ್ಮ

FIR IN GANDHI CHOUCK STATION
ವಿಜಯಪುರ ನಗರದ ಗಾಂಧಿ ಚೌಕ್ ಠಾಣೆ ಹಿಂಬದಿ ನಿಲ್ಲಿಸಿದ ವಾಹನಗಳು ಬೆಂಕಿಯಲ್ಲಿ ಧಗಧಗಿಸಿದವು.
Published on

ವಿಜಯಪುರ: ಇಲ್ಲಿನ ಗಾಂಧಿ ಚೌಕ್ ಪೊಲೀಸ್ ಠಾಣೆ ಹಿಂದಿನ ಆವರಣದಲ್ಲಿ ಸೋಮವಾರ ಅಗ್ನಿ ಅವಘಡದಿಂದಾಗಿ ಹಲವು ವಾಹನಗಳು ಭಸ್ಮವಾಗಿವೆ.

ಠಾಣೆಯ ಹಿಂಭಾಗದಲ್ಲಿ ಮಧ್ಯಾಹ್ನ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಸುತ್ತಲೂ ದಟ್ಟ ಹೊಗೆ ಆವರಿಸಿದ್ದು ಟೈಯರ್ ಸ್ಪೋಟಗೊಂಡ ಸದ್ದು ಕೇಳಿ ಜನ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿ ನೋಡಲಾಗಿ ಅಪಘಾತ ಹಾಗೂ ಇತರೆ ಪ್ರಕರಣಗಳಲ್ಲಿ ಜಫ್ತು ಮಾಡಿದ ಹಲವು ವಾಹನಗಳು ಸುಟ್ಟು ಕರಕಲಾಗಿವೆ.

ಸ್ಥಳಕ್ಕೆ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು. ಅಷ್ಟರಲ್ಲಾಗಲೇ ಸುಮಾರು 15 ವಾಹನಗಳು ಭಸ್ಮವಾಗಿದ್ದವು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net