ಹಳೆ ಡಿಡಿಪಿಐ ಕಚೇಗೆ ಬೆಂಕಿ: ದಾಖಲೆಗಳು ಭಸ್ಮ

raichur
raichur
Published on

ರಾಯಚೂರು ನಗರದ ಹಳೆಯ ಶಾಲಾ ಶಿಕ್ಷಣ ಇಲಾಖೆಯ ದಾಖಲೆಗಳ ಕೊಠಡಿಗೆ ಬೆಂಕಿ ಹತ್ತಿ ಆಪಾರ ಪ್ರಮಾಣ ದಾಖಲೆಗಳು ಮಂಗಳವಾರ ಸುಟ್ಟು ಭಸ್ಮವಾಗಿವೆ.

ಇಲಾಖೆಯು ಶಿಥಿಲಾವ್ಯವಸ್ಥೆಯಾಗಿರುವುದರಿಂದ ಕಳೆದ ಮೂರು ವರ್ಷದ ಹಿಂದೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಒಂದು ಕೊಠಡಿಯಲ್ಲಿ ಸುಮಾರು 50 ರಿಂದ 60 ವರ್ಷದ ದಾಖಲೆಗಳನ್ನು ಸಂಗ್ರಹಿಸಿ ಇಡಲಾಗಿತ್ತು.

ಬೆಂಕಿ ಹತ್ತಿದ ಕೂಡಲೇ ಸ್ಥಳೀಯರು ಆಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದ್ದರಿಂದ ತಕ್ಷಣವೇ ಸ್ಥಳಾಕ್ಕಾಗಮಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ದಾಖಲೆಗಳ ಕೊಠಡಿಗೆ ಹಾಕಿರುವ ಶೆಲ್ಟರ್‌ನ ಬೀಗ ಹೊಡೆದು ಹಾಕಿ ಶೇ 90 ರಷ್ಟು ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ಹತ್ತಿದ್ದರಿಂದ ದಾಖಲೆಗಳು ಸುಟ್ಟು ಭಸ್ಮವಾಗಿವೆ.

ದಾಖಲೆಗಳ ಕೊಠಡಿಯಲ್ಲಿದ್ದು ಹಳೆಯ ಪೀಠೋಪಕರಣಗಳು, ರಿಪೇರಿಯಾಗದ ಎಲೆಕ್ಟ್ರಾನಿಕ್ ವಸ್ತುಗಳ ಇದ್ದವು ಎನ್ನಲಾಗಿದೆ. ಹಳೆಯ ದಾಖಲೆಗಳ ಎರಡು ಕೊಠಡಿಗಳ ಪೈಕಿ ಒಂದು ಕೊಠಡಿಗೆ ಮಾತ್ರ ಬೆಂಕಿ ಹತ್ತಿಕೊಂಡಿತ್ತು.

ದಾಖಲೆಗಳ ಕೊಠಡಿಗೆ ಬೆಂಕಿ ಹತ್ತಿದ ಮಾಹಿತಿ ತಿಳಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ಕೆ.ಡಿ ಬಡೀಗೇರ್ ಸ್ಥಳಕ್ಕಾಮಿಸಿ ಪರಿಶೀಲನೆ ನಡೆಸಿ ಮಾತನಾಡಿ, ದಾಖಲೆಗಳ ಕೊಠಡಿಯಲ್ಲಿ ಸುಮಾರು 50-60 ವರ್ಷಗಳ ಹಳೆಯ ದಾಖಲೆಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಕಚೇರಿ ಹಿಂಭಾಗದಲ್ಲಿದ್ದ ಕೊಠಡಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಆಗಿಲ್ಲ, ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು, ಕೊಠಡಿಯಲ್ಲಿರುವ ಉಳಿದ ದಾಖಲೆಗಳನ್ನು ಸ್ಥಳಾಂತರ ಮಾಡಲಾಗುವುದು. ಘಟನೆ ಕುರಿತು ಪೋಲಿಸ್ ಠಾಣೆಗೆ ದೂರು ನೀಡಿ ತನಿಖೆ ನಡೆಸಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net