ಕಾಟನ್​ ಬಾಕ್ಸ್​ ಗೋದಾಮಿಗೆ ಬೆಂಕಿ

Untitled-2
Published on

ದೊಡ್ಡಬಳ್ಳಾಪುರ: ತಾಲೂಕಿನ ಹೊರವಲಯದ ಎಳ್ಳುಪುರ ರಸ್ತೆಯಲ್ಲಿರುವ ಪ್ಲಾಸ್ಟಿಕ್​ ತ್ಯಾಜ್ಯ ತುಂಬಿದ್ದ ಕಾಟನ್​ ಬಾಕ್ಸ್​ ಗೋದಾಮಿಗೆ ಶುಕ್ರವಾರ ಆಕಸ್ಮಿಕ ಬೆಂಕಿ ತಗುಲಿದೆ. ಬೆಂಕಿಯ ಕೆನ್ನಾಲಿಗೆಗೆ ಕಾಟನ್​ ಬಾಕ್ಸ್​ ಗೋದಾಮಿನಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಬೂದಿಯಾಗಿವೆ. ಮಾಹಿತಿ ತಿಳಿದ ದೊಡ್ಡಬಳ್ಳಾಪುರದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net