

ಬಳ್ಳಾರಿ: ನಗರದಲ್ಲಿರುವ ಹಳೆಯ ರಾಯಲ್ ಚಿತ್ರಮಂದಿರದಲ್ಲಿ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದೆ.
ಅನೇಕ ವರ್ಷಗಳಿಂದ ರಾಯಲ್ ಚಿತ್ರಮಂದಿರ ಪಾಳು ಬಿದ್ದಿತ್ತು. ಇದರಲ್ಲಿ ಸಿನಿಮಾದ ಪೋಸ್ಟರ್ ಮತ್ತು ಹಳೆಯ ವಸ್ತುಗಳನ್ನು ಇಡಲಾಗಿತ್ತು.
ಆದರೆ, ನಿನ್ನೆ ಯಾರೋ ಕಿಡಿಗೇಡಿಗಳು ಚಿತ್ರಮಂದಿರಕ್ಕೆ ಬೆಂಕಿ ಹಾಕಿದ್ದು, ಅಲ್ಲಿದ್ದ ವಸ್ತುಗಳೆಲ್ಲ ಸಂಪೂರ್ಣ ಸುಟ್ಟು ಭಸ್ಮವಾಗಿವೆ ಎಂದು ಅಗ್ನಿ ಶಾಮಕದಳದ ಇನ್ಸ್ಪೆಕ್ಟರ್ ಬಸವರಾಜ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.