ತುಂಬೆ 50 ಎಕ್ರೆ ಜಾಗಕ್ಕೆ ತಗಲಿದ ಬೆಂಕಿ

thumbe
Published on

ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಮಜಿ ಎಂಬಲ್ಲಿ 50 ಎಕ್ರೆಯಷ್ಟು ಪ್ರದೇಶದುದ್ದಕ್ಕೂ ಬೆಂಕಿ ಹಬ್ಬಿದ್ದು, ಮೂರು ಅಗ್ನಿ ಶಾಮಕ ದಳ ಸೇರಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ.
ವಿದ್ಯುತ್ ಟ್ರಾನ್ಸ್ ಫರ್ಮರ್ ನಿಂದಾಗಿ ಬೆಂಕಿ ತಗಲಿರುವ ಶಂಕೆಯಿದೆ. ಬೆಂಕಿ ಪ್ರದೇಶದುದ್ದಕ್ಕೂ ಹಬ್ಬುತ್ತಿದ್ದ ಸ್ಥಳೀಯ 50 ರಷ್ಟು ಮಂದಿ ಯುವಕರ ತಂಡ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ‌ . ಸ್ಥಳೀಯ ಗ್ರಾ.ಪಂ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರೂ, ಅಧ್ಯಕ್ಷ ಭೇಟಿ ನೀಡದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net