ಸ್ಫೋಟಕವಿದ್ದ ಲಾರಿಗೆ ಬೆಂಕಿ

fire Hosmaru
Published on

ಕಾರ್ಕಳ: ಸ್ಫೋಟಕಕ್ಕೆ ಬಳಸಲಾಗುವ ಜಿಲೆಟಿನ್ ಪೌಡರ್ ಸಾಗಿಸುತ್ತಿದ್ದ ಗೂಡ್ಸ್ ಲಾರಿಗೆ ಹೊಸ್ಮಾರು ಬಳಿ ಶನಿವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಹಿಡಿದಿದೆ

ಮೂಡುಬಿದಿರೆ ಅಗ್ನಿ ಶಾಮಕ ದಳ ಸಿಬ್ಬಂದಿ ತಕ್ಷಣ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸುವ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ. ಘಟನೆಯಲ್ಲಿ ಗೂಡ್ಸ್ ಲಾರಿಯ ಕ್ಯಾಬಿನ್ ಸುಟ್ಟು ಹೋಗಿದೆ. ಲಾರಿ ವರಂಗದ ಕೆಲ್ಟಕ್ ಎಕ್ಸೋ ಸಂಸ್ಥೆಯಿಂದ ಕುಣಿಗಲ್‌ನತ್ತ ತೆರಳುತ್ತಿತ್ತು. ತಲಾ 25 ಕೆ.ಜಿ.ಗಳ 600 ಬಾಕ್ಸ್, ಒಟ್ಟು 15 ಟನ್ ಕೆಲವೆಕ್ಸ್ 90 ಸ್ಫೋಟಕವನ್ನು ಲಾರಿಯಲ್ಲಿ ಸಾಗಾಟ ಮಾಡಲಾಗುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net