ಮಂಗಳೂರಲ್ಲಿ ಧಗಧಗನೆ ಉರಿದ ಪರ್ಫ್ಯೂಮ್‌ ಫ್ಯಾಕ್ಟರಿ

WhatsApp Image 2021-04-24 at 3.07.45 PM
Published on

ಮಂಗಳೂರು: ಮಂಗಳೂರು ವಿಶೇಷ ಆರ್ಥಿಕ ವಲಯದೊಳಗಿನ ಕೆಮಿಕಲ್‌ ಘಟಕದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು ಇಡೀ ಘಟಕದಿಂದ ಭಾರಿ ಪ್ರಮಾಣದಲ್ಲಿ ಬೆಂಕಿ, ಹೊಗೆ ಹೊರಬರುತ್ತಿದೆ.
ಜೊತೆಯಲ್ಲಿ ಸ್ಪೋಟಗಳ ಸದ್ದೂ ಕೇಳಿ ಬರುತ್ತಿದ್ದು ದೊಡ್ಡ ಪ್ರಮಾಣದಲ್ಲಿ ನಾಶ ನಷ್ಟ ಸಂಭವಿಸಿರುವ ಸಾಧ್ಯತೆ ಗೋಚರಿಸಿದೆ.
ಆಂತಿಯಾ ಆರೊಮೆಟಿಕ್ಸ್‌ ಎನ್ನುವ ಮಹಾರಾಷ್ಟ್ರ ಮೂಲದ ಕಂಪನಿಯ ಸಹಸಂಸ್ಥೆಯಾಗಿರುವ ಕೆಟಸಿಂತ್‌ ಕೆಮಿಕಲ್ಸ್‌ ಎನ್ನುವ ಪರ್ಫ್ಯೂಮ್‌ ತಯಾರಿಕಾ ಫ್ಯಾಕ್ಟರಿಯಲ್ಲಿ ಈ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಘಟಕದಲ್ಲಿ ಸ್ಪೋಟದೊಂದಿಗೆ ದಟ್ಟ ಹೊಗೆ, ಬೆಂಕಿ ಕಾಣಿಸಿಕೊಂಡಿದ್ದು ಹಲವು ಅಗ್ನಿಶಾಮಕ ಘಟಕಗಳನ್ನು ಸೇರಿಸಿಕೊಂಡು ಕಾರ್ಯಾಚರಣೆ ನಡೆಸಿದರೂ ಇದುವರೆಗೆ ಬೆಂಕಿ ನಿಯಂತ್ರಿಸಲು ಸಾಧ್ಯವಾಗಿಲ್ಲ.
ಎಂಎಸ್‌ಇಝಡ್‌ ಆವರಣದ ಒಳಗಿರುವ ಹಲವು ಪೆಟ್ರೋಕೆಮಿಕಲ್ಸ್‌ ಘಟಕಗಳಲ್ಲಿ ಇದೂ ಒಂದು. ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಕಂಪನಿಯ ಮ್ಯಾನೇಜರ್‌ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪರಿಸರದಲ್ಲಿ ರಾಸಾಯನಿಕ ಉರಿಯುವ ಕಟು ವಾಸನೆ ಆವರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net