ಅಗ್ನಿ ಅವಘಡ, ಎರಡು ಮನೆಗಳಿಗೆ ಹಾನಿ

05
Published on

ಹಿರೇಬಾಗೇವಾಡಿ: ಆಕಸ್ಮಿಕ ಬೆಂಕಿ ತಗುಲಿ ಎರಡು ಮನೆಗಳು ಬೆಂಕಿಗಾಹುತಿಯಾದ ಘಟನೆ ಸೋಮವಾರ ಗ್ರಾಮದ ಪೇಟೆ ಬೀದಿಯಲ್ಲಿ ಸಂಭವಿಸಿದೆ.

ಈ ಮನೆಗಳು ಪೇಟೆ ಬೀದಿಯ ಶಿವಪ್ಪ ಶಿದ್ಲಿಂಗಪ್ಪ ಗಾಣಗಿ, ಚಂದ್ರಪ್ಪ ಅಪ್ಪಯ್ಯಪ್ಪ ಅಗಸಿಮನಿ ಮತ್ತು ಮಂಜುನಾಥ ಅಪ್ಪಯ್ಯಪ್ಪ ಅಗಸಿಮನಿ ಎಂಬುವರಿಗೆ ಸೇರಿದ್ದಾಗಿದೆ.

ಬೆಳಗ್ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಒಳಗಿರುವ ಮನೆ ಬಳಕೆಯ ಸಾಮಗ್ರಿ ಸುಟ್ಟು ಭಸ್ಮವಾಗಿವೆ. ಸುದ್ದಿ ತಿಳಿದ ಅಗ್ನಿ ಶಾಮಕ ದಳದ ಮೂರು ವಾಹನಗಳು ಘಟನಾ ಸ್ಥಳಕ್ಕೆ ಆಗಮಿಸಿಸಾರ್ವಜನಿಕರ ನೆರವಿನೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ತಹಸೀಲ್ದಾರ್ ಆರ್.ಕೆ.ಕುಲಕರ್ಣಿ, ಕಂದಾಯ ನಿರೀಕ್ಷಕ ಶ್ರೀಕಾಂತ ಹೈಗರ, ಸಿಪಿಐ ನಾಗರಾಜ ಅಂಬಿಗೇರ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net