ವಾಣಿಜ್ಯ ಮಳಿಗೆಗಳಲ್ಲಿ ಅಗ್ನಿ ಅವಡ, ಡಿಸಿ, ಎಸ್ಪಿ ನೇತೃತ್ವದಲ್ಲಿ ನಂದಿಸುವ ಕಾರ್ಯ, ಕೋಟ್ಯಂತರ ರೂ. ನಷ್ಟ

fire accident in koppal commercial coplex sp dc take necessary action
ಕೊಪ್ಪಳದಲ್ಲಿ ಸೋಮವಾರ ವಾಣಿಜ್ಯ ಮಳಿಗೆಗಳು ಬೆಂಕಿ ಹತ್ತಿಕೊಂಡು ಉರಿಯುತ್ತಿರುವುದು.
Published on

ಕೊಪ್ಪಳ: ನಗರದ ಹೃದಯ ಭಾಗ ರೈಲ್ವೆ ನಿಲ್ದಾಣ ರಸ್ತೆಯಲ್ಲಿನ ವಾಣಿಜ್ಯ ಮಳಿಗೆಗಳಿಗೆ ಸೋಮವಾರ ಬೆಂಕಿ ಹೊತ್ತಿಕೊಂಡಿದ್ದು, ಸಾಕಷ್ಟು ನಷ್ಟ ಸಂಭವಿಸಿದೆ. ಇತ್ತೀಚಿನ ವರ್ಷಗಳಲ್ಲೇ ನಡೆದ ಬಹುದೊಡ್ಡ ಅಗ್ನಿ ಅವಡ ಇದಾಗಿದ್ದು, ಸ್ವತ: ಜಿಲ್ಲಾಧಿಕಾರಿ ನಲಿನ್​ ಅತುಲ್​, ಎಸ್ಪಿ ಯಶೋದಾ ವಂಟಗೋಡಿ ಮುಂದೆ ನಿಂತು ನಂದಿಸುವ ಕಾರ್ಯಾಚರಣೆ ನಡೆಸಿದರು. ಅದೃಷ್ಟ ವಶಾತ್​ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಮೇರಾಜ ಅವರಿಗೆ ಸೇರಿದ ಪೇಂಟ್​ ಅಂಗಡಿಯಲ್ಲಕಿ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ನೋಡ ನೋಡುತ್ತಿದಂತೆ ಅಕ್ಕಪಕ್ಕದ 10-12 ಅಂಗಡಿಗಳಿಗೆ ವ್ಯಾಪಿಸಿತು. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದಿಲ್ಲವಾದರೂ ಪೇಂಟ್​ ಅಂಗಡಿಯಾದ ಕಾರಣ ಬೆಂಕಿ ಪ್ರಮಾಣ ಹೆಚ್ಚಿತು. ಅಕ್ಕಪಕ್ಕದಲ್ಲಿ ್ಲೆವುಡ್​, ಕೂದಲು, ಎಲೆಟ್ರಿಕಲ್ಸ್​ ಅಂಗಡಿಗಳು ಇದ್ದಿದ್ದರಿಂದ ಬೆಂಕಿ ಬೇಗ ವ್ಯಾಪಿಸಿತು. ಆರಂಭದಲ್ಲಿ ಅಗ್ನಿಶಾಮಕದಳದ ಒಂದು ವಾಹನ ಬಂದು ಬೆಂಕಿ ನಂದಿಸಲು ನಡೆಸಿದ ಯತ್ನ ಲ ನೀಡಲಿಲ್ಲ.

ಬಳಿಕ ಮೂರು ವಾಹನಗಳು ಬಂದರೂ ನಿಯಂತ್ರಣ ಕಷ್ಟವಾಯಿತು. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬಂದ ಎಸ್ಪಿ ಯಶೋದಾ ವಂಟಗೋಡಿ ನಂದಿಸುವ ಕಾರ್ಯಚರಣೆಗೆ ಸಲಹೆ ನೀಡಿದರು. ನಂತರ ಡಿಸಿ ನಲಿನ್​ ಅತುಲ್​ ಆಗಮಿಸಿ ಕಾರ್ಯಾಚರಣೆ ಚುರುಕುಗೊಳಿಸಿದರು. ಹೊಸಪೇಟೆ ಅಗ್ನಿಶಾಮಕ ವಾಹನ, ಎಂಎಸ್​ಪಿಎಲ್​, ಕಲ್ಯಾಣಿ ಸ್ಟೀಲ್ಸ್​, ಕಿಲೋರ್ಸ್ಕರ್​ ಕಾರ್ಖಾನೆಗಳಿಂದ ಸುಧಾರಿತ ಅಗ್ನಿ ನಂದಕ ವಾಹನಗಳನ್ನು ತರಿಸಿಲಾಯತು. ನಗರಸಭೆ ಟ್ಯಾಂಕರ್​ ನೀರು ಪೂರೈಸಿತು. ಎಲ್ಲ ಅಂಗಡಿಗಳು ಮುಚ್ಚಿದ್ದರಿಂದ ನಂದಿಸಲು ಸಿಬ್ಬಂದಿ ಹರಸಾಹಸ ಪಡುವಂತಾಯಿತು. ಜೆಸಿಬಿ ಬಳಸಿ ಅಂಗಡಿ ಬಾಗಿಲು, ಗೋಡೆ ಒಡೆಯಲಾಯಿತು.

ಸತತ ನಾಲ್ಕೆದು ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ಒಂದು ಹಂತಕ್ಕೆ ಬೆಂಕಿ ನಿಯಂತ್ರಣ ಸಾಧ್ಯವಾಯಿತು. ಪೊಲೀಸರು, ಅಗ್ನಿಶಾಮಕ ಅಧಿಕಾರಿಗಳು, ಸಾರ್ವಜನಿಕರು ಬೆಂಕಿ ನಂದಿಸಲು ಸಹಾಯ ಮಾಡಿದರು. ಅಲ್ಲದೇ ಅಕ್ಕ&ಪಕ್ಕದ ಅಂಗಡಿಗಳಲ್ಲಿನ ಸಾಮಾನುಗಳನ್ನು ಸ್ಥಳಾಂತರಿಸಿ ಹೆಚ್ಚಿನ ನಷ್ಟ ಸಂಭವಿಸುವುದನ್ನು ತಡೆದರು. ದೊಡ್ಡಮಟ್ಟದಲ್ಲಿ ಬೆಂಕಿ ವ್ಯಾಪಿಸಿದ್ದನ್ನು ನೋಡಲು ಸಾವಿರಾರು ಜನರು ಸೇರಿದ್ದರಿಂದ ಟ್ರಾಫಿಕ್​ ಉಂಟಾಯಿತು. ಕಾರ್ಯಾಚರಣೆಗೂ ತೊಂದರೆಯಾಯಿತು.

ಪೊಲೀಸರು ಜರನ್ನು ಚದುರಿಸಲು ಸಾಹಸಪಟ್ಟರು. ರಸ್ತೆ, ಅಕ್ಕ&ಪಕ್ಕದ ಕಟ್ಟಡಗಳ ಮೇಲೆ ನಿಂತು ಜನರು ಮೊಬೈಲ್​ನಲ್ಲಿ ದೃಶ್ಯ ಸೆರೆಹಿಡಿದರು. ತಹಸೀಲ್ದಾರ್​ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್​ ಇತರ ಅಧಿಕಾರಿಗಳು ನಂದಿಸುವ ಕಾರ್ಯಕ್ಕೆ ಸಾಥ್​ ನೀಡಿದರು.

ಕಣ್ಣೀರು ಹಾಕಿದ ಅಂಗಡಿಕಾರರು
ಜೀವನಕ್ಕೆ ಆಧಾರವಾಗಿರುವ ಅಂಗಡಿ ಕಣ್ಣ ಮುಂದೆಯೇ ಸುಟ್ಟು ಭಸ್ವಾಗುತ್ತಿರುವುದನ್ನು ಕಂಡು ಅಂಗಡಿಕಾರರು ಗೋಳಾಡಿ ಕಣ್ಣೀರು ಹಾಕಿದರು. ಸಾರ್ವಜನಿಕರು ಅವರನ್ನು ಸಮಾಧಾನಿಸಿದರು. ಕಾರ್ಯಾಚರಣೆ ಮುಂದಾಳತ್ವವಹಿಸಿದ್ದ ಎಸ್ಪಿ ಯಶೋದಾ ವಂಟಗೋಡಿ ಕಾಲಿಗೆ ಏನೋ ಬಡಿದು ಗಾಯಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net