ಸಕಲೇಶಪುರದ ಬೇಕರಿಯಲ್ಲಿ ಓವನ್ ಸ್ಫೋಟದಿಂದ ಅಗ್ನಿ ಅವಘಡ, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ

IMG_20200214_133338.JPG
Published on

ಸಕಲೇಶಪುರ: ಪಟ್ಟಣದ ಪುರಸಭೆ ಎದುರಿನಲ್ಲಿರುವ ಐಯ್ಯಂಗಾರ್ ಬೇಕರಿಯಲ್ಲಿ ಓವನ್ ಸ್ಫೋಟದಿಂದ ಆಕಸ್ಮಿಕ ಬೆಂಕಿ‌ಹೊತ್ತಿಕೊಂಡು ಅಂಗಡಿ ಭಸ್ಮವಾಗಿದ್ದು, ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗುವ ಭೀತಿ ಎದುರಾಗಿತ್ತು.

ಬೆಂಕಿ ನಂದಿಸುವ ಯತ್ನದಲ್ಲಿ ನಿರತವಾಗಿದ್ದ ಅಗ್ನಿಶಾಮಕದಳದ ವಾಹನಕ್ಕೆ ನೀರಿನ ಕೊರತೆ ಎದುರಾದ ಕಾರಣ ತಹಬದಿಗೆ ಬಂದಿದ್ದ ಬೆಂಕಿ ಮತ್ತೆ ವ್ಯಾಪಿಸಲಾರಂಭಿಸಿತು.

ವಿಜಯ ಬ್ಯಾಂಕ್, ಸೂಪರ್ ಬಜಾರ್ , ಪೆಟ್ರೋಲ್ ಬಂಕ್ ಗೆ ಬೆಂಕಿ ವ್ಯಾಪಿಸುವ ಅಪಾಯವಿರುವುದರಿಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ‌ ನಂದಿಸಲು ಭಾರಿ ಯತ್ನದಲ್ಲಿ ತೊಡಗಿದ್ದಾರೆ.

ಬೆಂಕಿಯಿಂದ ಪಟ್ಟಣದ ಹೃದಯ ಭಾಗದಲ್ಲಿ ದಟ್ಟ ಹೊಗೆ ಆವರಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ನೋಡಲು ಮುಗಿಬಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net